ಕೋಟ, ಜ.12 (DaijiworldNews/AA): ಆರ್ಎಸ್ಎಸ್ ಸ್ಥಾಪನೆಯಾಗಿ ನೂರು ವರ್ಷವಾದ ಹಿನ್ನಲೆ, ಸಾಲಿಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಥ ಸಂಚಲನ ಆಯೋಜಿಸಲಾಗಿತ್ತು.











ಸಂಘಕ್ಕೆ ನೂರು ವರ್ಷ ಸಂಭ್ರಮ ಮತ್ತು ಮಕರ ಸಂಕ್ರಾಂತಿ ಉತ್ಸವದ ಹಿನ್ನೆಲೆಯಲ್ಲಿ ಪಥ ಸಂಚಲನ ಆಯೋಜಿಸಲಾಗಿತ್ತು. ಸುಮಾರು 320 ಆರ್ ಎಸ್ ಎಸ್ ಕಾರ್ಯಕರ್ತರು ಈ ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಕೆಂಪಿ ವೆಂಕಟರಮಣ ದೇವಳದಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಹೊರಟ ಪಥಸಂಚಲನ ಸಾಲಿಗ್ರಾಮ ಶಿವರಾಮ ಕಾರಂತ ಬೀದಿ ಮೂಲಕ ಸಾಗಿ ಮರಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಪಥಸಂಚಲನ ಸಾಗಿತು. ಬಳಿಕ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಮೈದಾನದಲ್ಲಿ ಪೆರೇಡ್ ನಡೆಸಿ ಪಥ ಸಂಚಲನ ಸಮಾಪ್ತಿಯಾಯಿತು.
ಹಿರಿಯ ಕಿರಿಯ ಗಣವೇಷಧಾರಿಗಳನ್ನು ಪುಷ್ಪವೃಷ್ಠಿಯ ಮೂಲಕ ಸಾರ್ವಜನಿಕರು ಸ್ವಾಗತಿಸಿದರು.
ಈ ಪಥಸಂಚಲನದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಭಾಗಿಯಾಗಿದ್ದರು.