ಕಾಸರಗೋಡು,ಜ.12(DaijiworldNews/TA): ಎರಡು ಕಿಲೋ ಗಾಂಜಾ ಸಹಿತ ಓರ್ವನನ್ನು ಕಾಸರಗೋಡಿನ ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಅಂಬಾರಿನ ಮುಹಮ್ಮದ್ ಆದಿಲ್ ಬಂಧಿತ ಆರೋಪಿ.

ಶನಿವಾರ ರಾತ್ರಿ ಉಪ್ಪಳ ಸಮೀಪದ ಮೈದಾನದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ಆದಿಲ್ ನನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ವಿಚಾರಿಸಿದಾಗ ಅಸ್ಪಷ್ಟ ಉತ್ತರ ನೀಡಿದ್ದು, ಈತನ ಬಳಿ ಇದ್ದ ಬ್ಯಾಗನ್ನು ತಪಾಸ ಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಈತನ ಬೈಕ್ ನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.