ಬಂಟ್ವಾಳ,ಜ.13 (DaijiworldNews/TA) : ತಾಲೂಕು ಕಚೇರಿ ,ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಬಂಟ್ವಾಳ ಆಡಳಿತ ಸೌಧದಲ್ಲಿ ನೂತನ ಕಚೇರಿಯ ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಡಿಜಿಟಲೀಕರಣಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ತಹಶಿಲ್ದಾರ್ ಅರ್ಚನಾ ಭಟ್ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶಾಸಕರಿಗೆ ತಿಳಿಸಿದರು. ತಾ.ಪಂ.ಮಾಜಿ ಸದಸ್ಯ ಪ್ರಭಾಕರ ಪ್ರಭು, ಉಪತಹಶೀಲ್ದಾರ್ ಗಳಾದ ನರೇಂದ್ರ ಭಟ್, ನವೀನ್ ಬೆಂಜನಪದವು, ದಿವಾಕರ, ಪ್ರಥಮ ದರ್ಜೆ ಸಹಾಯಕ ಸೀತಾರಾಮ , ಗ್ರಾಮ ಕರಣೀಕ ಜನಾರ್ಧನ ಮತ್ತಿತರರು ಉಪಸ್ಥಿತರಿದ್ದರು.