ಕಾಸರಗೋಡು, ಜ.13 (DaijiworldNews/AA): 100 ಗ್ರಾಂ ಎಂಡಿಎಂಎ ಮಾದಕವಸ್ತು ಸಹಿತ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಸೋಮವಾರ ಮುಂಜಾನೆ ಆದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮುಳಿಯಾರು ಮಾಸ್ತಿಕುಂಡುವಿನ ಮುಹಮ್ಮದ್ ಸವಾದ್ (26), ಕೋಟೆಕಣಿಯ ಶಾನ್ ವಾಜ್ (50), ಈತನ ಪತ್ನಿ ಶರೀಫಾ (40) ಮತ್ತು ಚೆಮ್ನಾಡ್ ಮೂಡಬಯಲಿನ ಪಿ. ಎಂ ಶುಹೈಬ್ (28) ಆರೋಪಿಗಳು.
ಬೋವಿಕ್ಕಾನ - ಇರಿಯಣ್ಣಿ ರಸ್ತೆಯ ಮಂಜಲ್ ನಲ್ಲಿ ಆರೋಪಿಗಳನ್ನು ಆದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರನ್ನು ತಡೆದು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ. ಬೆಂಗಳೂರಿನಿಂದ ಮಾದಕ ವಸ್ತು ತಂದಿರುವುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.