ಉಡುಪಿ, ಜ.14 (DaijiworldNews/AA): ಮಣಿಪಾಲದ ನೇತಾಜಿ ನಗರದ ೪ನೇ ಕ್ರಾಸ್ ರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಬ್ಬರೇ ವಾಸಿಸುತ್ತಿದ್ದ ಯುವಕನೊಬ್ಬ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತಪಟ್ಟವರನ್ನು ಅಲ್ಲಸಾಬ್ ಅಲಿಯಾಸ್ ಪ್ರಕಾಶ್(28) ಎಂದು ಗುರುತಿಸಲಾಗಿದೆ.
ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲು ಸಹಕರಿಸಿದರು. ಮಣಿಪಾಲ ಠಾಣೆಯ ಹೆಡ್ ಕಾನ್ಸ್ಟೇಬಲ್ ಸುರೇಶ್ ಕುಮಾರ್ ಅವರು ಶಂಕರ್ ಎಸ್ ಅವರ ನೆರವಿನಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.