ಪುತ್ತೂರು ,ಜ.14 (DaijiworldNews/AK): ಕರ್ನಾಟಕ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಗಳ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಅಕ್ಷರ ಕೆ ಸಿ ಶೇಖಡಾ 95% ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪುತ್ತೂರಿನ ನಾಟ್ಯರಂಗ ನೃತ್ಯ ಕಲಾ ಶಾಲೆಯ ಗುರುಗಳಾದ ವಿ.ಮಂಜುಳಾ ಸುಬ್ರಹ್ಮಣ್ಯ ಅವರ ಶಿಷ್ಯೆ. ಈಕೆ ಸುದಾನ ವಸತಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದು ಚಂದ್ರಶೇಖರ ಭಟ್ ಕೆ ಮತ್ತು ಕವಿತಾ ಅಡೂರು ಅವರ ಮಗಳು.