ಮಂಗಳೂರು, ಜ.16 (DaijiworldNews/AA): "ತಿರುವುಗಳಿಲ್ಲದೆ ಜೀವನ ಪೂರ್ಣಗೊಳಿಸಲು ಸಾಧ್ಯವಿಲ್ಲ" ಎಂಬ ಮಾತಿದೆ. ಕೆಲವೊಮ್ಮೆ ಈ ತಿರುವುಗಳು ಅದೃಷ್ಟವನ್ನು ತರುತ್ತದೆ. ಆದರೆ ಇನ್ನು ಕೆಲವೊಮ್ಮೆ ಅವು ಅನಿರೀಕ್ಷಿತ ದುರಂತಗಳಿಗೆ ಕಾರಣವಾಗುತ್ತವೆ. ದುರದೃಷ್ಟವಶಾತ್, ಅರ್ಕುಲ, ಫರಂಗಿಪೇಟೆಯ ನಿವಾಸಿಯಾದ ಜೀವನ್ ವಿನೋದ್ ಡಿ'ಸೋಜಾ ಅವರು ತಾನು ಈ ರೀತಿಯ ದುರಂತವನ್ನು ಎದುರಿಸಬೇಕಾಗುತ್ತದೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ.

ಜೀವನ್ ಅವರು ತನ್ನ ಕುಟುಂಬದವರನ್ನು ಪೋಷಿಸಲು ತೆಂಗಿನ ಮರ ಹತ್ತುವ ಕೆಲಸವನ್ನು ಮಾಡುತ್ತಿದ್ದರು. ಅವರ ಪತ್ನಿ ಗೃಹಿಣಿಯಾಗಿದ್ದು, ಈ ದಂಪತಿಗೆ ಇನ್ನೂ ಓದುತ್ತಿರುವ ಇಬ್ಬರು ಮಕ್ಕಳಿದ್ದಾರೆ. ಆದರೆ ಕಳೆದ ವಾರ, ಕೆಲಸದಲ್ಲಿದ್ದಾಗ, ಜೀವನ್ ಅವರು ದುರದೃಷ್ಟವಶಾತ್ ತೆಂಗಿನ ಮರದಿಂದ ಬಿದ್ದ ಪರಿಣಾಮ ತೀವ್ರ ಗಾಯವುಂಟಾಗಿತ್ತು. ವೈದ್ಯಕೀಯ ವರದಿಯ ಪ್ರಕಾರ ಅವರ ಬೆನ್ನುಮೂಳೆಯ ಡಿಸ್ಕ್ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ ಅವರು ಚಿಕಿತ್ಸೆಗಾಗಿ ಕನಿಷ್ಠ ಒಂದು ವರ್ಷ ಕಾಲ ಹಾಸಿಗೆಯಲ್ಲೇ ಇರಬೇಕಾಗುತ್ತದೆ. ಈ ಅವಧಿಯ ನಂತರವೂ, ಅವರು ಯಾವುದೇ ರೀತಿಯ ಕೆಲಸಕ್ಕೆ ಮರಳಲು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬುದು ಖಚಿತವಾಗಿಲ್ಲ.
ಜೀವನ್ ಅವರ ಆರಂಭಿಕ ಚಿಕಿತ್ಸೆಗಾಗಿ ಕುಟುಂಬವು ಈಗಾಗಲೇ 3 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿದೆ. ಆದರೆ ಜೀವನ್ ಅವರ ಚೇತರಿಕೆಗೆ ಇನ್ನೂ ದೀರ್ಘ ಕಾಲಬೇಕಿದೆ. ಜೀವನ್ ಅವರ ಶಸ್ತçಚಿಕಿತ್ಸೆ ಹಾಗೂ ನಿರಂತರ ವೈದ್ಯಕೀಯ ಆರೈಕೆಗಾಗಿ ಇನ್ನೂ 3 ರಿಂದ 4 ಲಕ್ಷ ರೂಪಾಯಿಗಳು ಅಗತ್ಯವಿದೆ. ಆದರೆ ಅವರ ವೈದ್ಯಕೀಯ ಚಿಕಿತ್ಸೆಗೆ ತಗುಲುವ ವೆಚ್ಚವು ಕುಟುಂಬಕ್ಕೆ ನಿಭಾಯಿಸಲು ಕಷ್ಟವಾಗಿದೆ.
ಆದ್ದರಿಂದ, ಜೀವನ್ ಅವರ ಕುಟುಂಬವು ಓದುಗರಿಂದ ಬೆಂಬಲ ಕೋರುತ್ತಿದೆ. ಅವರ ಚಿಕಿತ್ಸಾಗಾಗಿ ಕೊಡುಗೆ ನೀಡುವಂತೆ ಮನವಿ ಮಾಡಿಕೊಂಡಿದೆ. ನಿಮ್ಮ ದೇಣಿಗೆಯು ಜೀವನ್ ಅವರಿಗೆ ಅಗತ್ಯವಾದ ಶಸ್ತ್ರಚಿಕಿತ್ಸೆಗಳು ಮತ್ತು ವೈದ್ಯಕೀಯ ಆರೈಕೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ಅವರಿಗೆ ಉತ್ತಮ ಜೀವನವನ್ನು ನಡೆಸಲು ಅವಕಾಶವನ್ನು ನೀಡುತ್ತದೆ ಮತ್ತು ಅವರ ಕುಟುಂಬವು ಭವಿಷ್ಯಕ್ಕಾಗಿ ಭರವಸೆಯನ್ನು ಮತ್ತೆ ಪಡೆಯಲು ಸಹಾಯ ಮಾಡುತ್ತದೆ. ಆರ್ಥಿಕ ನೆರವಿನ ಜೊತೆಗೆ, ಜೀವನ್ ಅವರ ಕುಟುಂಬವು ಈ ಸಂಕಷ್ಟದ ಸಮಯವನ್ನು ಸಹಿಸಿಕೊಳ್ಳಲು ಶಕ್ತಿಗಾಗಿ ಪ್ರಾರ್ಥನೆಯನ್ನು ಸಹ ಬಯಸುತ್ತದೆ.
ಆರ್ಥಿಕ ನೆರವು ಮಾಡಲು ಬಯಸುವವರಿಗಾಗಿ ಬ್ಯಾಂಕ್ ಖಾತೆ ವಿವರಗಳು:
Jeevan Vinod D Souza
AC No:0641101060190
IFSC:CNRB0000641
Canara Bank, Farangipet Branch