ಬಂಟ್ವಾಳ, ಜ.16 (DaijiworldNews/AK): ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ರೇಖಾ ಜೆ.ಶೆಟ್ಟಿ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಮಂಗಳೂರು ಮನಪಾ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಖಾ ಶೆಟ್ಟಿ ಅವರನ್ನು ಬಂಟ್ವಾಳ ಪುರಸಭೆಗೆ ವರ್ಗಾಯಿಸಿ, ಬಂಟ್ವಾಳ ಮುಖ್ಯಾಧಿಕಾರಿಯವರನ್ನು ಶಿವಮೊಗ್ಗಕ್ಕೆ ವರ್ಗಾವಣೆ ಮಾಡಿ ಅದೇಶ ಮಾಡಲಾಗಿದೆ.
ರೇಖಾ ಶೆಟ್ಟಿ ಅವರು ಮೂಲತಃ ಬಂಟ್ವಾಳ ತಾಲೂಕಿನವರಾಗಿದ್ದು, ಈ ಹಿಂದೆ ಪುರಸಭೆಯ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಅನುಭವಿಯಾಗಿದ್ದಾರೆ. ಅಲ್ಲದೆ ಬಂಟ್ವಾಳ ಪುರಸಭೆಯ ವಿವಿಧ ಹುದ್ದೆಗಳನ್ನು ನಿರ್ವಹಿಸಿದವರು.