ಮಂಗಳೂರು, ಜೂ 11 (Daijiworld News/MSP): ಉದ್ಯೋಗ ನಿಮಿತ್ತ ದ.ಕ. ಜಿಲ್ಲೆಯಿಂದ ಕುವೈತ್ ಗೆ ತೆರಳಿದ್ದ ಕರಾವಳಿಯ 35 ಮಂದಿ ಯುವಕರು ಸೇರಿದಂತೆ 200ಕ್ಕೂ ಅಧಿಕ ಮಂದಿ ಭಾರತೀಯರು ಅತಂತ್ರರಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸೋಮವಾರ ಶೋನ್ ನಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಅಲ್ಪಮಟ್ಟಿಗೆ ಹಿನ್ನಡೆಯಾಗಿದೆ.
ಪಬ್ಲಿಕ್ ಅಥಾರಿಟಿನಲ್ಲಿ ಸೋಮವಾರ ಕರೆದಿದ್ದ ಅಹವಾಲು ಸಭೆ ಕೊನೆ ಕ್ಷಣದಲ್ಲಿ ಶೋನ್ ( ನ್ಯಾಯಾಲಯ ಮಾದರಿ ಸರ್ಕಾರಿ ಸ್ವಾಮ್ಯದ ಸಂಸ್ಥೆ)ಗೆ ಸ್ಥಳಾಂತರಗೊಂಡಿತು. ಈ ಸಭೆಯಲ್ಲಿ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಆಹ್ವಾನ ಇರಲಿಲ್ಲ. ಹೀಗಾಗಿ ಅತಂತ್ರರಿಗೆ ಸಮರ್ಥವಾಗಿ ಸಮಸ್ಯೆ ವಿವರಿಸಲು ಅಧಿಕಾರಿಗಳ ಮುಂದೆ ಭಾಷಾ ಮಾಧ್ಯಮದ ತೊಡಕಾಗಿ ಕಾಡಿತು. ಅಲ್ಲಿನ ಅಧಿಕಾರಿಗಳು ಅರೇಬಿಕ್ ಮತ್ತು ಇಂಗ್ಲೀಷ್ ಭಾಷೆಯನ್ನು ಮಾತ್ರ ಬಲ್ಲವರಾಗಿದ್ದರು.
ಮತ್ತೊಮ್ಮೆ ಜೂ ೧೧ ರಂದು ಮತ್ತೆ ಪಾಮ್ ಮತ್ತು ಶೋನ್ ಅಧಿಕಾರಿಗಳು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಜತೆ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಶೋನ್ ನಲ್ಲಿ ಶೋನ್ ಮತ್ತು ಪಾಮ್ ಅಧಿಕಾರಿಗಳ ಅಹವಾಲು ಸಲ್ಲಿಸಲು ಸುಡುವ 48 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಭಾರತೀಯ ನೌಕರರು ಸುಮಾರು 2 ಗಂಟೆ ಕಾಯಬೇಕಾದ ಪರಿಸ್ಥಿತಿ ಎದುರಾಯಿತು.
ಹೀಗಾಗಿ ಪ್ರಕರಣ ಇತ್ಯರ್ಥವಾಗಿ ಅತಂತ್ರರು ಮತ್ತೆ ತಾಯ್ನಾಡಿಗೆ ಹಿಂದಿರುಗಲು ಇನ್ನು ಸ್ವಲ್ಪ ಕಾಲಾವಕಾಶ ಹಿಡಿಯುವುದು ಖಂಡಿತಾ.