ಕಾರ್ಕಳ, ಜ.21 (DaijiworldNews/AA): ಮಂಗಳೂರಿನಲ್ಲಿ ಎಂಬಿಎ ಓದುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ಮನೆಯ ಹಿಂದಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾರ್ಕಳದ ಕಸಬಾ ನಿವಾಸಿ ಕೆ.ವೆಂಕಟೇಶ ಹೆಗಡೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಕಳೆದ ಕೆಲವು ದಿನಗಳಿಂದ ಅವರು ಓದಲು ತೊಂದರೆಯಾಗುತ್ತಿದೆ ಎಂದು ಮನೆಯವರಿಗೆ ಹೇಳಿಕೊಂಡು ಸುಮ್ಮನಿದ್ದರು. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.