ಮಂಗಳೂರು,ಜ.22(DaijiworldNews/TA): ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಧಿಕಾರಿ ಗಳ ನಿರ್ಲಕ್ಷ ಕ್ಕೆ ಬೇಸತ್ತು ಸ್ವತಃ ಸ್ಟ್ಯಾನಿ ಬಂಟ್ವಾಳ್ ಅವರೇ ಝೀಬ್ರಾ ಕ್ರಾಸ್ ಹಾಕಿದ್ದಾರೆ.

ಮಂಗಳೂರು ಬಿಕರ್ಣಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಾಲ ಯೇಸು ಪುಣ್ಯಕ್ಷೇತ್ರದ ದ್ವಾರದ ಎದುರುಗಡೆ ಇರುವ ಯುಟರ್ನ್ ಬಳಿ ಝೀಬ್ರಾ ಕ್ರಾಸ್ ಇತ್ತು ಅದು ಸವೆದು ಹೋಗಿ ಹಲವು ವರ್ಷವಾಗಿತ್ತು ಈ ಬಗ್ಗೆ ಸ್ಟ್ಯಾನಿ ಅವರು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳ ಗಮನಕ್ಕೆ ತಂದರು. ಆದರೆ ಅವರು ನಮ್ಮಲ್ಲಿ ಜನ ಇಲ್ಲಾ ಎಂದು ಕೇರ್ಲೆಸ್ ಮಾಡುತಿದ್ದರು.
ಇಲ್ಲಿ ಜನರಿಗೆ ರಸ್ತೆ ದಾಟಲು ತುಂಬಾ ಕಷ್ಟ ಆಗುತ್ತಿದ್ದು, ಈ ಬಗ್ಗೆ ಪದೇ ಪದೇ ಸ್ಟ್ಯಾನಿ ಅವರೇ ಖುದ್ದಾಗಿ ನಂತೂರ್ ನಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ ಕಚೇರಿಗೆ ತೆರಳಿ ಅಲ್ಲಿ ಇರುವ ಅಧಿಕಾರಿಗಳ ಗಮನಕ್ಕೆ ತಂದರೂ ಅವರು, ನಮ್ಮಲ್ಲಿ ಜನ ಇಲ್ಲಾ ಬೇಕಾದ್ರೆ 20,000 ಸಾವಿರ ಹಣ ಕೊಡಿ ನಾವೂ ಮಾಡಿಸಿ ಕೊಡುತ್ತೇವೆ ಎಂದು ಅಸಡ್ಡೆಯ ಉತ್ತರ ನೀಡಿದ್ದರು.
ತದನಂತರ ಟ್ರಾಫಿಕ್ ಪೊಲೀಸ್ ಅಧಿಕಾರಿಗಳಲ್ಲಿ ಸ್ಟ್ಯಾನಿ ಅವರು ವಿಷಯ ತಿಳಿಸಿ ಸ್ವತಃ ತಾವೇ ಝೀಬ್ರಾ ಕ್ರಾಸ್ ಹಾಕುತ್ತೇನೆ ಎಂದು ಹೇಳಿದಾಗ ಅಧಿಕಾರಿಗಳು ಕೂಡ ಸಹಕಾರ ನೀಡುತ್ತೇನೆ ಎನ್ನುವ ಭರವಸೆ ನೀಡಿದರು.
ನಂತರ ಸ್ಟ್ಯಾನಿ ಅವರೇ ಪೈಂಟ್ ಖರೀದಿ ಮಾಡಿ ಝೀಬ್ರಾ ಕ್ರಾಸ್ ಮಾಡಿದ್ದು ಅವರಿಗೆ ಜೆರ್ರಿ ಲೋಬೊ ಮಿಹಿರ್ ಡಿಕ್ಸಿತ್ ಮತ್ತು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಹಕಾರ ನೀಡಿದರು.
'ಈ ನನ್ನ ಸಣ್ಣ ಸೇವೆಯಿಂದ ಸಾರ್ವಜನಿಕರಿಗೆ ರಸ್ತೆ ದಾಟಲು ತುಂಬಾ ಅನುಕೂಲವಾಗುತ್ತೆ ರಾಷ್ಟ್ರೀಯ ಹೆದ್ದಾರಿ ಯವರು ಜನರಿಂದ ಇಷ್ಟು ಸುಂಕ ವಸೂಲಿ ಮಾಡುವಾಗ ಈ ಕೆಲಸ ಮಾಡಲು ಹಣ ಕೇಳುವಾಗ ಇವರಿಗೆ ನಾಚಿಕೆಯಾಗ ಬೇಕು ಇವರಿಗೆ ಆಗದ ಕೆಲಸ ನಾನೂ ಮಾಡಿ ತೋರಿಸಿದ್ದೇನೆ.' ಎಂದು ಸ್ಟ್ಯಾನಿ ಅವರು ಸಂತಸ ವ್ಯಕ್ತಪಡಿಸಿದರು.