ಕುಂದಾಪುರ, ಜ.22(DaijiworldNews/AK): ಬೈಂದೂರು ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್ ಮೇಲೆ ಲೋಕಾಯುಕ್ತ ದಾಳಿ ನಡೆಸಿದ ಘಟನೆ ಇಂದು ನಡೆದಿದೆ.
ಗಂಗೊಳ್ಳಿ ಗ್ರಾಮ ಪಂಚಾಯತ್ ನ ಪಿಡಿಓ ಉಮಾಶಂಕರ್ ಹಾಗೂ ದ್ವಿತೀಯ ದರ್ಜೆ ಗುಮಾಸ್ತ ಶೇಖರ ಜಿ ಅವರು 9/11 ಹಕ್ಕುಪತ್ರ ನೀಡುವ ಸಂದರ್ಭ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಇಲಾಖೆಯವರ ಬಲೆಗೆ ಬಿದ್ದ್ದಿದ್ದಾರೆ.


ಪಿಡಿಓ 9/11 ಮಾಡಿಸಲು 20 ಸಾವಿರ ಲಂಚ ಕೇಳಿದ್ದರು ಎನ್ನಲಾಗಿದೆ. ದ್ವಿತೀಯ ದರ್ಜೆ ಗುಮಾಸ್ತ 2 ಸಾವಿರ ರೂಪಾಯಿ ಹಣ ಪಡೆದಿದ್ದ ಎಂದು ತಿಳಿಯಲಾಗಿದ್ದು, ಒಟ್ಟು 22 ಸಾವಿರ ಲಂಚ ಪಡೆಯುತ್ತಿದ್ದಾಗ ಪಿಡಿಓ ಹಾಗೂ ಗುಮಾಸ್ತ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ.
ಮಹಮ್ಮದ್ ಹನೀಫ್ ದೂರಿನ ಮೇಲೆ ಪ್ರಭಾರ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದ ಲೋಕಾಯುಕ್ತ ಇಲಾಖೆ, ಲಂಚ ಪಡೆಯುತ್ತಿದ್ದ ಗುಮಾಸ್ತ ಹಾಗೂ ಪಿಡಿಓ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.