ಕಡಬ,ಜ.22(DaijiworldNews/AK): ಥಾರ್ ಜೀಪ್(KA01MX9632) ಗಾಡಿಯೊಂದು ಇವತ್ತು ಬೆಳಗ್ಗೆ 6ಗಂಟೆ ಅಂದಾಜಿಗೆ ಹಿಂದೂಸ್ಥಾನ್ ಪೆಟ್ರೋಲ್ ಬಂಕ್ ನಲ್ಲಿ ಗಾಡಿ ಮತ್ತು ಕ್ಯಾನಿಗೆ ಪುಲ್ ಟ್ಯಾಂಕ್ ಡಿಸೇಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗಿದ್ದಾನೆ.

ಮಾತ್ರವಲ್ಲದೆ ಇದೆ ನಂಬರಿನ ಇನ್ನೊಂದು ಮಹೇಂದ್ರ ಎಕ್ಸ್ಯುವಿ ಗಾಡಿ ಕಳೆದ ಡಿಸೆಂಬರ್ 25ರಂದು ಸುಳ್ಯ ಪೈಚಾರು ಪೆಟ್ರೋಲ್ ಬಂಕಿನಲ್ಲಿ ಡಿಸೇಲ್ ಹಾಕಿಸಿ ಹಣ ಕೊಡದೆ ಪರಾರಿಯಾಗಿದ್ದಾನೆ. ಇದೇ ವ್ಯಕ್ತಿ ತುಂಬಾ ಕಡೆ ಡಿಸೇಲ್ ಹಾಕಿಸಿ ಹಣ ಕೊಡದೆ ಮೋಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ನಂಬರಿನ ಗಾಡಿ ಎಲ್ಲಿಯಾದರು ಸಿಕ್ಕಿದರೆ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕಾಗಿ ವಿನಂತಿ ಮಾಡಲಾಗಿದೆ.