ಕುಂದಾಪುರ, ,ಜ.22(DaijiworldNews/AK): ಪಾದಚಾರಿಯೊಬ್ಬರು ಮುಂಜಾನೆ ನಡೆದುಕೊಂಡು ಹೋಗುತ್ತಿದ್ದಾಗ ಆಟೋರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕುಂದಾಪುರದ ಬಸ್ರೂರು ಮೂರುಕೈಯಲ್ಲಿರುವ ನಿತ್ಯಾನಂದ ಕಾಂಪ್ಲೆಕ್ಸ್ ಬಳಿ ಜನವರಿ 22 ಬುಧವಾರದಂದು ಈ ದಾರುಣ ಘಟನೆ ನಡೆದಿದೆ.

ಮೃತರನ್ನು ಕುಂದಾಪುರದ ಒಡೆಯರ್ ಹೋಬಳಿ ನಿವಾಸಿ ಸೋಮಯ್ಯ ಎಂದು ಗುರುತಿಸಲಾಗಿದೆ.ವರದಿಗಳ ಪ್ರಕಾರ ಸೋಮಯ್ಯ ಅವರು ಮುಂಜಾನೆ 5:30 ರ ಸುಮಾರಿಗೆ ಬಿ.ಸಿ.ರೋಡ್ ಮೂಲಕ ಬಸ್ರೂರು ಮೂರುಕೈ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ನಿತ್ಯಾನಂದ ಕಾಂಪ್ಲೆಕ್ಸ್ ಬಳಿ ಬರುತ್ತಿದ್ದಂತೆ ಮೂಡ್ಲಕಟ್ಟೆ ಕಡೆಯಿಂದ ಬಸ್ರೂರು ಮೂರುಕೈ ಕಡೆಗೆ ಅಜಾಗರೂಕತೆಯಿಂದ ವೇಗವಾಗಿ ಬಂದ ಆಟೋರಿಕ್ಷಾ ಎಡಕ್ಕೆ ಪಲ್ಟಿ ಹೊಡೆದು ಡಿಕ್ಕಿ ಹೊಡೆದಿದೆ. ಪರಿಣಾಮ ಸೋಮಯ್ಯ ರಸ್ತೆ ಬದಿಗೆ ಎಸೆದಿದ್ದು, ಮುಖ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ.
ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಣಂಬೂರು ಪಿಎಸ್ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.