ಬಂಟ್ವಾಳ, ಜ.24(DaijiworldNews/TA): ಹೆಲ್ಮೆಟ್ ಧರಿಸಿಲ್ವ? ಹಾಗಾದರೆ ರೂ. 500 ದಂಡ ಕಟ್ಟಿ ಇಲ್ಲವೆ? ಹೊಸ ಹೆಲ್ಮೆಟ್ ಖರೀದಿಸಿ, ಹೆಲ್ಮೆಟ್ ಧರಿಸಿದ ಪ್ರಯಾಣ ಕಾನೂನು ಬಾಹಿರ ಹಾಗೂ ಜೀವಕ್ಕೆ ಅಪಾಯ. ಯಾವುದೇ ಕಾರಣಕ್ಕೆ ಹೆಲ್ಮೆಟ್ ತಪ್ಪಿಸುವಂತಿಲ್ಲ. ಇದು ಗುರುವಾರ ಬಂಟ್ವಾಳದ ಬಿ.ಸಿ.ರೋಡಿನ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸ್ ಹಾಗೂ ಆರ್.ಟಿ.ಒ.ಇಲಾಖೆಯ ಜಂಟಿ ಕಾರ್ಯಚರಣೆಯ ಮುಖ್ಯಾಂಶಗಳು.



ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಸಂಚಾರಿ ಪೋಲೀಸ್ ಠಾಣೆ ಹಾಗೂ ಆರ್.ಟಿ.ಒ.ಇಲಾಖೆಯ ವತಿಯಿಂದ ಹೆಲ್ಮೆಟ್ ಮೇಳ ಎಂಬ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನೂರಕ್ಕೂ ಅಧಿಕ ಪ್ರಯಾಣಿಕರು ಹೆಲ್ಮೆಟ್ ಸ್ಥಳದಲ್ಲೇ ಖರೀದಿ ಮಾಡಿದರೆ, ಹತ್ತಾರು ಜನರಿಗೆ ದಂಡ ವಿಧಿಸಲಾಯಿತು. ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸದೆ ಪ್ರಯಾಣಿಸುವ ಸುಮಾರು 60 ಸವಾರರನ್ನು ನಿಲ್ಲಿಸಿ ಕಾನೂನು ಪ್ರಕಾರ ರೂ.500. ದಂಡ ವಿಧಿಸಲಾಗಿದೆ.
ಬಾಕಿ ಉಳಿದ 200 ಕ್ಕೂ ಅಧಿಕ ಸವಾರರು ಹೆಲ್ಮೆಟ್ ಪಡೆದುಕೊಂಡಿದ್ದಾರೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆನಂತಪದ್ಮನಾಭ ತಿಳಿಸಿದ್ದಾರೆ. ಹೆಲ್ಮೆಟ್ ಇಲ್ಲದೆ ಪ್ರತಿನಿತ್ಯ ಪ್ರಯಾಣಿಸುವ ಸವಾರರು ಹೆಲ್ಮೆಟ್ ಪಡೆದುಕೊಂಡರೆ ಇನ್ನುಳಿದ ಸವಾರರ ಮನೆಯಲ್ಲಿ ಹೆಲ್ಮೆಟ್ ಇದೆ ಎಂಬ ಕಾರಣಕ್ಕಾಗಿ ದಂಡ ಕಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದರ ಜೊತೆ ದ್ವಿಚಕ್ರ ವಾಹನಗಳಲ್ಲಿ ಇಬ್ಬರು ಹೆಲ್ಮೆಟ್ ಧರಿಸಿ ಪ್ರಯಾಣಿಸುವವರಿಗೆ ಗುಲಾಬಿ ಹೂ ನೀಡಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ, ಟ್ರಾಫಿಕ್ ಎಸ್.ಐ.ಸುತೇಶ್, ಟ್ರಾಫಿಕ್ ಎಸ್.ಐ.ಸಂಜೀವ, ಎ.ಆರ್.ಟಿ.ಒ ಚರಣ್, ಬ್ರೇಕ್ ಇನ್ಸ್ ಪೆಕ್ಟರ್ ಪ್ರಮೋದ್ ಭಟ್ ಹಾಗೂ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದರು.