ಬಂಟ್ವಾಳ, ಜ.24(DaijiworldNews/TA): ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಹಾಗೂ ಅಭಿವೃದ್ಧಿ ಸಂಸ್ಥೆ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ,ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಮತ್ತು DAY NRLM ಬಂಟ್ವಾಳ ಸಹಯೋಗದಲ್ಲಿ ಮಳೆನೀರು ಕೊಯ್ಲು, ಸೌರಶಕ್ತಿ ಹಾಗೂ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಕ್ರಮ ಬಂಟ್ವಾಳ ತಾಲೂಕು ಪಂಚಾಯತ್ ನ ಸಭಾಂಗಣದಲ್ಲಿ ನಡೆಯಿತು.


ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ಸಚಿನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. "ಇಂತಹ ಮಾಹಿತಿ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಕ್ಕೆ ಅಗತ್ಯವಾಗಿದ್ದು ನಾವೆಲ್ಲರೂ ಮಳೆನೀರು ಕೊಯ್ಲು ಹಾಗೂ ಸೌರ ಶಕ್ತಿ ಅಳವಡಿಕೆಯಲ್ಲಿ ಸರ್ವರಿಗೂ ಮಾದರಿಯಾಗೋಣ ಎಂದು ತಿಳಿಸಿದರು. NRLM ನ ಜಿಲ್ಲಾ ವ್ಯವಸ್ತಾಪಕಾರದ ಹರಿಪ್ರಸಾದ್ ಮಾಹಿತಿ ಕಾರ್ಯಕ್ರಮದ ಅಗತ್ಯ ಹಾಗೂ ಮಹಿಳೆಯರ ಭಾಗವಹಿಸುವಿಕೆಯ ಮಹತ್ವದ ಬಗ್ಗೆ ತಿಳಿಸಿದರು.
ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಹಾಗೂ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಇಲ್ಲಿಯ ಅಧಿಕಾರಿ ರವಿ ಕುಮಾರ್ ಮಳೆನೀರು ಕೊಯ್ಲು ಬಗ್ಗೆ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇಲ್ಲಿಯ ಅಧಿಕಾರಿ ಜೀವನ್ ಕೊಲ್ಯ, ಘನ ತ್ಯಾಜ್ಯ ನಿರ್ವಹಣೆ ಬಗ್ಗೆ, ಸೆಲ್ಕೋ ಸಂಸ್ಥೆಯ ಅಧಿಕಾರಿ ರವೀಣಾ ಸೌರ ಶಕ್ತಿ ಜೀವನೋಪಾಯ ಯಂತ್ರಗಳ ಬಗ್ಗೆ ಮಾಹಿತಿ ನೀಡಿದರು. NRLM ಬಂಟ್ವಾಳ ತಾಲೂಕಿನ ತಾಲೂಕು ವ್ಯವಸ್ಥಾಪಕ ಪ್ರದೀಪ್ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.