ಮಂಗಳೂರು ಡಿ. 3: ಜನಪ್ರಿಯ ಗ್ರಾಮೀಣ ಕ್ರೀಡಾಕೂಟ ರಾಮ ಲಕ್ಷಣಾ ಜೋಡುಕರೆ ಕಂಬಳಕ್ಕೆ ನಗರದ ಗೋಲ್ ಫಿಂಚ್ ಸಿಟಿಯಲ್ಲಿ ಡಿ 3 ರ ಭಾನುವಾರ ಚಾಲನೆ ದೊರಕಿತು. ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎನ್. ವಿನಯ್ ಹೆಗ್ಡೆ ರಾಮ ಲಕ್ಷ್ಮಣ ಜೋಡುಕೆರೆ ಕಂಬಳ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಂಬಳ ತುಳುನಾಡಿನ ಜನಪ್ರೀಯ ಗ್ರಾಮೀಣ ಕ್ರೀಡೆ. ಈ ರಾಮ ಲಕ್ಷ್ಮಣ ಕ್ರೀಡೆ ದೀರ್ಘಕಾಲ ಹೀಗೆ ಮುಂದುವರಿಯಲಿ ಎಂಬುದು ನಮ್ಮ ಅಶಯ ಎಂದರು.
ಎಮ್ ಆರ್ ಜೆ ಗ್ರೂಪ್ ನ ಸಂಸ್ಥಾಪಕ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಅವರು, "ಕರಾವಳಿ ಪ್ರದೇಶದ ಎಲ್ಲ ಜನರು ಭಾವನಾತ್ಮಕವಾಗಿ ಈ ಸಾಂಪ್ರದಾಯಿಕ ಕ್ರೀಡಾ ಕಂಬಳದೊಂದಿಗೆ ಬಾಂಧವ್ಯ ಬೆಸೆದುಕೊಂಡಿದ್ದಾರೆ. ಈ ಕಂಬಳ ಕ್ರೀಡೋತ್ಸವವು ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಮರಳಿರುವುದರಿಂದ ನಮಗೆ ತುಂಬಾ ಸಂತೋಷವಾಗಿದೆ ಎಂದರು.
ಬಳಿಕ ಮಾತನಾಡಿದ ಎಂಎಲ್ಎ ಜೆ.ಆರ್ ಲೋಬೋ ಅವರು "ಸುದೀರ್ಘ ಸಮಯದ ಬಳಿಕ ನಾವು ಮಂಗಳೂರಿನಲ್ಲಿ ಕಂಬಳ ಕ್ರೀಡೆ ಸಂಘಟಿಸುತ್ತಿದ್ದೇವೆ ಈ ಕ್ಷಣ ಅತ್ಯಂತ ಸಂತೋಷದ ಕ್ಷಣ. ನಗರದಲ್ಲಿ ಕಂಬಳ ಸಂಘಟನೆ ಮಾಡುವುದೆಂದರೆ ಸುಲಭದ ಮಾತಲ್ಲ ಎಂದರು . ಇನ್ನು ವಿಧಾನ ಸಭಾ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, "ತುಳುನಾಡಿನ ಈ ಕ್ರೀಡೆಗೆ ಹಲವಾರು ಅದೆ ತಡೆಗಳು ಬಂದವು. ಆದರೆ ನ್ಯಾಯಾಲಯದಲ್ಲಿ ಹೋರಾಟದ ಪ್ರತಿಫಲವಾಗಿ ಇಂದು ರಾಮ ಲಕ್ಷ್ಮಣ ಜೋಡುಕರೆ ಕಂಬಳನ್ನು ಸಂಘಟಿಸಲಾಗುತ್ತಿದೆ ಮತ್ತು ಈ ಕಂಬಳ ಕ್ರೀಡೆ ಇನ್ನು ನಿರ್ವಿಘ್ನವಾಗಿ ಮುಂದುವರಿಯುತ್ತದೆ ಎನ್ನುವ ಆಶಾವಾದ ನನ್ನದು ಎಂದು ತಿಳಿಸಿದರು.
ಕಂಬಳ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್ ಬ್ರಿಜೆಶ್ ಚೌಟಾ ಅವರು ಮಾತನಾಡಿ , "ಎರಡು ವರ್ಷಗಳ ಹಿಂದೆ ನಾವು ಕಂಬಳ ಕ್ರೀಡೆ ಸಂಘಟಿಸಲು ಯೋಚಿಸಿದ್ದೇವು , ದುರಾದೃಷ್ಟವಶಾತ್ ಬಳಿಕ ಕ್ರೀಡೆ ಆಯೋಜಿಸಲು ಆಗಲೇ ಇಲ್ಲ. ಈ ಸಾಂಪ್ರದಾಯಿಕ ಕ್ರೀಡೆಯ ಉಳಿವಿಗಾಗಿ ನಡೆದ ಯುದ್ದದಲ್ಲಿ ಕೊನೆಗೂ ಜಯ ಸಿಕ್ಕಿದೆ ಎಂದರು .ಆರು ವಿಭಾಗದಲ್ಲಿ ನಡೆಯುವ ಸ್ಪರ್ಧೆಯಲ್ಲಿ ೧೨೦ ಜೋಡಿ ಕೋಣಗಳು ಈ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿವೆ.