ಮಂಗಳೂರು, ಜ.25(DaijiworldNews/TA): ಸಂತ ಲಾರೆನ್ಸ್ ಪುಣ್ಯ ಕ್ಷೇತ್ರ ಬೋಂದೆಲ್, ರೋಹನ್ ಕಾರ್ಪೋರೇಷನ್ ಸಹಭಾಗಿತ್ವದಲ್ಲಿ ಎರಡು ದಿನಗಳ ಬೋಂದೆಲ್ ಫಿಯೆಸ್ಟಾ 2025 ಮಂಗಳೂರಿನ ಬೋಂದೆಲ್ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ಆವರಣದಲ್ಲಿ ನೆರವೇರಿತು.













ಕಾರ್ಯಕ್ರಮಕ್ಕೆ ದೈಜಿವರ್ಲ್ಡ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಕಾಂಗ್ರೆಸ್ ಮುಖಂಡರಾದ ರೆಹಮಾನ್ ಖಾನ್ ಕುಂಜತ್ ಬೈಲ್, ಶ್ರೀನಿವಾಸ್ ಸಾಲ್ಯಾನ್, ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ಪ್ರಧಾನ ಧರ್ಮಗುರು ಫಾ. ಆ್ಯಂಡ್ರೂ ಲಿಯೋ ಡಿಸೋಜ ಇತರ ಗಣ್ಯರು ಸೇರಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಫಾ. ಪೀಟರ್ ಗೊನ್ಸಾಲ್ವಿಸ್, ಸಹಾಯಕ ಧರ್ಮ ಗುರು ಫಾ. ವಿಲಿಯಂ ಡಿಸೋಜ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜಾನ್ ಡಿಸಿಲ್ವ, ಕಾರ್ಯದರ್ಶಿ ಸಂತೋಷ್ ಮಿಸ್ಕಿತ್, ಕಾರ್ಯಕ್ರಮ ಸಂಯೋಜಕ ಮನೋಜ್ ಲೂಯಿಸ್ ಮತ್ತಿತರರು ಉಪಸ್ಥಿತರಿದ್ದರು.