ಉಡುಪಿ, ಜ.25 (DaijiworldNews/AK): ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಡುಪಿಯ 80 ಬಡಗಬೆಟ್ಟು ನಿವಾಸಿ ಮುತ್ತಯ್ಯ ಎಂಬವರ ಪುತ್ರ ಬಾಲಾಜಿ ಎಂ.ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಪೊಲೀಸರಿಗೆ ಬೇಕಾಗಿದ್ದು, ಆತನ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು.ಜನವರಿ 24 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೆಂಗಳೂರಿನ ಹರಳೂರು ಬಸ್ ನಿಲ್ದಾಣದ ಬಳಿ ಆರೋಪಿ ಪತ್ತೆಯಾಗಿದ್ದರು.
ಈ ಮಹತ್ವದ ಮಾಹಿತಿಯ ಮೇರೆಗೆ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಟಿ ವಿ ನೇತೃತ್ವದ ಪಿಎಸ್ಐಗಳಾದ ಅನಿಲ್ ಕುಮಾರ್, ಅಕ್ಷಯ ಕುಮಾರಿ, ಹೆಡ್ ಕಾನ್ಸ್ಟೆಬಲ್ ಥಾಮ್ಸನ್ ಮತ್ತು ಪೊಲೀಸ್ ಪೇದೆ ರವಿರಾಜ್ ಅವರ ನೇತೃತ್ವದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.