ಕಾರ್ಕಳ, ಜ.27 (DaijiworldNews/AA): ಸಾಣೂರು ಪುಲ್ಕೇರಿ ಬೈಪಾಸ್ ಎಂಬಲ್ಲಿ ಓಮ್ನಿ ಕಾರೊಂದು ಹೊತ್ತಿ ಉರಿದ ಘಟನೆ ಇಂದು ಮಧ್ಯಾಹ್ನ 12.00 ಗಂಟೆಗೆ ಸಂಭವಿಸಿದೆ.





ಶೇಖರ್ ಹೆಗ್ಡೆ ಎಂಬವರು ಕಾರನ್ನು ಸ್ಟಾರ್ಟ ಮಾಡಲು ಮುಂದಾದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಜ್ವಾಲೆ ಇಡೀ ಕಾರನ್ನು ಆವರಿಸಿತು.
ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದರು.