ಮೂಡುಬಿದಿರೆ, ಜ.27 (DaijiworldNews/AK): ಮಿಜಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಅದಕ್ಕಾಗಿ ಮಿಜಾರು ಗುತ್ತು ಬ್ರಿಜೇಶ್ ಶೆಟ್ಟಿ ಯವರ ಜಮೀನಿನಲ್ಲಿದ್ದ ಮರಗಳನ್ನು ಮೀಸಲಿಟ್ಟಿದ್ದು, ಆದಿತ್ಯವಾರ ರಾತ್ರಿ ಹೊತ್ತು ಯಾರು ಇಲ್ಲದ ಸಮಯ ಸಾಧಿಸಿ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿ ಮರಗಳನ್ನು ಕಳ್ಳತನ ಮಾಡಿರುತ್ತಾರೆ ಅಂಶ ಬೆಳಕಿಗೆ ಬಂದಿದೆ.


ಘಟನಾ ನಡೆದಿರುವ ಸ್ಥಳದ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ -169 ಕಾಮಗಾರಿ ನಡೆಯುತ್ತಿರುವುದು ಗಮನಾರ್ಹವಾಗಿದೆ.ಮಾತ್ರವಲ್ಲದೇ, ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನಪಡಿಸಿದ್ದ ಜಮೀನಿನಲ್ಲಿ ರಾಜಾರೋಷವಾಗಿ ಕೆಂಪುಕಲ್ಲಿನ ಗಣಿಗಾರಿಕೆಯೂ ನಡೆಸುತ್ತಿದೆ.
ಸಾಣೂರಿನಿಂದ ಬಿಕರ್ನಕಟ್ಟೆಯವರೆಗೆ ಇದ್ದ ಮುಗಿಲೆತ್ತರದ ಕೆಲವು ಮರಗಳನ್ನು ಕಡಿಯಲಾಗಿದ್ದು, ದೇವಸ್ಥಾನಕ್ಕೆ ಮೀಸಲಿಟ್ಟ ಮರವನ್ನು ಕೂಡ ಇದೇ ತಂಡ ಕಳ್ಳತನ ಮಾಡಿರಬಹುದು ಎಂದು ಬ್ರಿಜೇಶ್ ಶೆಟ್ಟಿ ಯವರು ಶಂಕೆ ವ್ಯಕ್ತಪಡಿಸಿದ್ದಾರೆ.
ಮರಗಳ ಕಳ್ಳತನ ಮಾಡಿದವರು ಕೂಡಲೇ ದೇವಸ್ಥಾನದ ಸನ್ನಿಧಿಗೆ ಒಪ್ಪಿಸಬೇಕೆಂದು ಬ್ರಜೇಶ್ ಶೆಟ್ಟಿಯವರು ಆಗ್ರಹಿಸಿದ್ದಾರೆ.ಈ ಘಟನೆಯ ಕುರಿತು ಮೂಡಬಿದಿರೆ ಆರ್ ಎಫ್ ಒ ಅವರಿಗೆ ಇ ಮೇಲ್ ಮೂಲಕ ದೂರು ನೀಡಿದ್ದಾರೆ.