ಬಂಟ್ವಾಳ,ಜ.27 (DaijiworldNews/AK): ನರಿಕೊಂಬು ಗ್ರಾಮದ ರಥಬೀದಿಯಲ್ಲಿರುವ ರೆಸಿಡೆನ್ಸಿ ಒಂದರ ಮುಂಭಾಗದಲ್ಲಿ ನಿಲ್ಲಿಸಿಲಾಗಿದ್ದ ಬೈಕ್ ಒಂದನ್ನು ಜ.26 ರಂದು ಆದಿತ್ಯ ವಾರ ರಾತ್ರಿ ವೇಳೆ ಕಳವು ಮಾಡಿದ್ದಾರೆ.

ಮೆಸ್ಕಾಂ ಉದ್ಯೋಗಿ ಆನಂದ ಎಂಬವರು ನರಿಕೊಂಬು ರಥಬೀದಿಯಲ್ಲಿರುವ ರೆಸಿಡೆನ್ಸಿ ಒಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕೆಲಸ ಮುಗಿಸಿ ಸಂಜೆ ವೇಳೆ ರಸ್ತೆಗೆ ತಾಗಿಕೊಂಡಿರುವ ಮನೆಯ ಮುಂಭಾಗದಲ್ಲಿ ಬೈಕ್ ನಿಲ್ಲಿಸಿದ್ದರು. ಪ್ರತಿ ದಿನ ಇವರು ಇಲ್ಲಿಯೇ ಬೈಕ್ ನಿಲ್ಲಿಸುತ್ತಿದ್ದು, ನಿನ್ನೆ ಕೂಡ ಅದೇ ಜಾಗದಲ್ಲಿ ನಿಲ್ಲಿಸಿ ಹೋಗಿದ್ದರು.
ರಾತ್ರಿ ವೇಳೆ ಕೈ ಯಲ್ಲಿ ಲೈಟರ್ ಒಂದನ್ನು ಹಿಡಿದು ಕೊಂಡು ನಡೆದುಕೊಂಡು ಬರುವ ವ್ಯಕ್ತಿಯೊಬ್ಬ ನಿಲ್ಲಿಸಿದ್ದ ಬೈಕ್ ಬಳಿ ಬಂದು ಕೀ ಯಿಂದ ಸ್ಟಾರ್ಟ್ ಮಾಡಿ ಕೊಂಡು ಹೋಗುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ .ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಬೈಕ್ ನ ಪತ್ತೆಗಾಗಿ ಪೋಲೀಸರ ತಂಡ ಬಲೆ ಬೀಸಿದೆ.