ಉಡುಪಿ, ಜ.28(DaijiworldNews/TA): ಕರಾವಳಿಯಲ್ಲಿ ಸಾಂಪ್ರದಾಯಕವಾಗಿ ನಡೆಸುವ ಕೈರಂಪಣಿ ಮೀನುಗಾರರಿಗೆ ಬಂಪರ್ ಫಸಲು ದೊರೆತಿದೆ. ಉಡುಪಿಯ ಪಡುಕೆರೆಯಲ್ಲಿ ಭರಪೂರ ಮೀನುಗಳು ಬಲೆಗೆ ಬಿದ್ದಿವೆ. ಲಕ್ಷಾಂತರ ರೂಪಾಯಿಯ ಭೂತಾಯಿ ಮೀನು ಬಲೆಗೆ ಬಿದ್ದು ಮೀನುಗಾರರಿಗೆ ಲಾಟರಿ ಹೊಡೆದಂತಾಗಿದೆ.

ಸಾಮಾನ್ಯ ವಾಗಿ ಕೈರಂಪಣಿ ಮೀನುಗಾರಿಕೆ ನಡೆಸುವ ಬಡ ಮೀನುಗಾರರು , ಕಾರ್ಮಿಕರು 10 ರಿಂದ 15 ಜನರ ತಂಡ ಕಟ್ಟಿಕೊಂಡು ಕೈರಂಪಣಿ ಮೀನುಗಾರಿಕೆಯನ್ನು ನಡೆಸುತ್ತಾರೆ. ಸಮುದ್ರ ತೀರದಿಂದ 2 ರಿಂದ 3 ನಾಟಿಕಲ್ ದೂರವರೆಗೆ ಕೈರಂಪಣಿ ಬಲೆಹಾಕಿ ಮೀನುಗಾರಿಕೆಯನ್ನು ನಡೆಸುತ್ತಾರೆ.
ಸಣ್ಣ ದೋಣಿಗಳ ಮೂಲಕ ಸಾಗಿ ಬಲೆ ಬೀಸಿ ಕೆಲವು ಗಂಟೆಗಳ ನಂತರ ದಡದಿಂದಲೇ ಬಲೆಯನ್ನು ಎಳೆಯುತ್ತಾರೆ. ಆದರೆ ಶ್ರಮಕ್ಕೆ ತಕ್ಕ ಪ್ರತಿಫಲದೊರಕುವುದು ಅಪರೂಪ. ಆದರೆ ಮಲ್ಪೆಯ ಪಡುಕೆರೆ ಬೀಚ್ ನಲ್ಲಿ ಕೈರಂಪಣಿ ಬಲೆ ಬೀಸಿದ ಮೀನುಗಾರರ ಅದೃಷ್ಟ ಕುಲಾಯಿಸಿತ್ತು. ಬೂತಾಯಿ ಮೀನುಗಳ ಗುಂಪು ಕೈರಂಪಣಿ ಬಲೆ ಬಿದ್ದಿದೆ. ಕೈರಂಪಣಿ ಮೀನುಗಾರಿಗೆ ಒಂದು ದಿನದ ಮಟ್ಟಿಗೆ ಜೇಬು ತುಂಬವ ಸಂಪಾದನೆ ಯಾದ್ರೆ ತಾಜಾ ಮೀನು ತಿನ್ನ ಬೇಕು ಅನ್ನೊ ಮೀನು ಪ್ರಿಯರಿಗೆ ರುಚಿ ರುಚಿಯಾದ ತಾಜಾ ಬೂತಾಯಿ ಮೀನು ದೊರಕಿದೆ.