ಮಂಗಳೂರು, ಜ.29(DaijiworldNews/TA): ನಗರದಲ್ಲಿ ಪ್ರೇತ ಉಚ್ಚಾಟನೆ ಹಿನ್ನೆಲೆಯಲ್ಲಿ ರಸ್ತೆ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ. ಈ ಘಟನೆ ಕೊಟ್ಟಾರದ ಮಹಾದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಬಳಿಯ ರಸ್ತೆಯಲ್ಲಿ ನಡೆದಿದ್ದು, ಅಳವಡಿಸಲಾಗಿದ್ದ ಬ್ಯಾನರ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಕೊಟ್ಟಾರದ ಪ್ರಮುಖ ರಸ್ತೆಗಳ ಮೇಲೆ ಬ್ಯಾನರ್ ಅಳವಡಿಸಲಾಗಿದ್ದು, ಸಾರ್ವಜನಿಕರನ್ನು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 3 ಗಂಟೆಯವರೆಗೆ ರಸ್ತೆಯಲ್ಲಿ ಓಡಾಡದಂತೆ ಮನವಿ ಮಾಡಲಾಗಿದೆ. ಈ ಸಮಯದಲ್ಲಿ ವಾಹನ ಸಂಚಾರವೂ ನಿಷೇಧಿಸಲಾಗಿದ್ದು, ಪ್ರೇತ ಉಚ್ಚಾಟನೆಯ ಸಂದರ್ಭದಲ್ಲಿ ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ನೀಡಲಾಗಿದೆ.
ದೈವ ಆರಾಧಕ ಪ್ರಜ್ವಲ್ ಹೇಳಿಕೆಯಲ್ಲಿ, "ಈ ದೈವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ಪೂಜಾ ವಿಧಿ ನಡೆದು ನಂತರ ಬ್ರಹ್ಮರಾಕ್ಷಸ ಮತ್ತು ಪ್ರೇತಾತ್ಮಗಳನ್ನು ಉಚ್ಚಾಟಿಸಲು ನಿರ್ಧರಿಸಲಾಗಿದೆ," ಎಂದು ತಿಳಿಸಿದ್ದಾರೆ. ಪ್ರೇತ ಉಚ್ಚಾಟನೆ ನಡೆಯುವ ಸಮಯದಲ್ಲಿ ಪೂಜಾ ವಿಧಿಗಳನ್ನು ಕ್ರಮಬದ್ಧವಾಗಿ ಅನುಸರಿಸಲಾಗುವುದು.
ಮಂಗಳೂರು ಪೊಲೀಸ್ ಇಲಾಖೆಗೆ ಕೂಡ ಆಯೋಜಕರು ಮನವಿ ಮಾಡಿದ್ದಾರೆ, ಹಾಗಾಗಿ 3-4 ಕಿಮೀ ವ್ಯಾಪ್ತಿಯ ಪ್ರದೇಶದಲ್ಲಿ ರಸ್ತೆಯಲ್ಲಿಯೂ ಹಾಗೂ ಜನ ಸಂಚಾರವನ್ನು ನಿಷೇಧಿಸಲಾಗಿದೆ. 5 ಗಂಟೆಗಳ ಕಾಲ ಮಂಗಳೂರು ನಗರದಲ್ಲಿ ಮುಖ್ಯ ರಸ್ತೆಗಳಲ್ಲಿ ಸಂಚಾರ ಇಲ್ಲದೇ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.