ಉಡುಪಿ,ಜ.30 (DaijiworldNews/AK): ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಕೆಲಕೇರಿ ನಿವಾಸಿ ರೋಸ್ ಮೇರಿ ಕೋಠ (39) ಜನವರಿ 18 ರಿಂದ ತನ್ನ 11 ವರ್ಷದ ಮಗ ರಿಶೋನ ಕೋಠಾ ಸಹಿತ ನಾಪತ್ತೆಯಾಗಿದ್ದಾರೆ.

ರೋಸ್ ಮೇರಿ ಕೋಥಾ 5 ಅಡಿ 6 ಇಂಚು ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಮತ್ತು ಕನ್ನಡ ಮತ್ತು ಕೊಂಕಣಿ ಮಾತನಾಡುತ್ತಾರೆ. ರಿಶೋನಾ ಕೋಥಾ 4 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಮತ್ತು ಕನ್ನಡ ಮತ್ತು ಕೊಂಕಣಿ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂ.ಸಂ. ಸಂಖ್ಯೆ: 08254-230338, ಪಿ.ಐ. ಕುಂದಾಪುರ ಠಾಣೆಯ ಮೊಬೈಲ್ ಸಂಖ್ಯೆ: 9480805455 ಎಂದು ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.