ಕಾರ್ಕಳ,ಜ.30 (DaijiworldNews/AK): ನಗರದ ಆನೆಕೆರೆ ಪರಿಸರದಲ್ಲಿ ಹಳೆಯದಾದ ಕಟ್ಟಡವೊಂದರಲ್ಲಿ ಅಗ್ನಿ ಕಾಣಿಸಿಕೊಂಡಿದ್ದು, ಕ್ಷಣಮಾತ್ರದಲ್ಲಿ ಇಡೀ ಕಟ್ಟಡವನ್ನೇ ಆವರಿಸಿಕೊಂಡಿದ್ದು, ಅಗ್ನಿಶಾಮಕದಳದವರು ನಡೆಸಿದ ಕಾರ್ಯಚರಣೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ.



ಉದ್ಯಮಿ ಗಣಪತಿ ಹೆಗ್ಡೆ ಎಂಬವರಿಗೆ ಸೇರಿದ ಕಟ್ಟಡದಲ್ಲಿ ಸದಾ ನಾಮಾಂಕಿತದ ಕುಶನ್ ವರ್ಕ್ಸ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ.ಅಗ್ನಿಶಾಮಕದಳದವರು ಅಗಮಿಸಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿರುವುದರಿಂದ ಪರಿಸರದ ಹಲವು ವ್ಯಾಪಾರ ಮಳಿಗೆಗಳಿಗೆ ತಗಲುತ್ತಿದ್ದ ಬೆಂಕಿಯ ಜ್ವಾಲೆ ಹತೋಟಿಗೆ ಬಂದಿದೆ.
ಮುನಿದುಕೊಂಡನೇ ಮಹಾಲಿಂಗೇಶ್ವರ?
8 ಮಾಗಣೆಗೆ ಒಳಪಟ್ಟ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ಶ್ರೀ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮ ಮುಗಿದ ಕೆಲವೇ ದಿನಗಳೊಳಗಾಗಿ ಈ ಘಟನೆ ನಡೆದಿರುವುದು ಗಮನಾರ್ಹ.ಧಾರ್ಮಿಕ ಕಾರ್ಯಕ್ರಮದ ರೂವಾರಿ ಉದ್ಯಮಿ ಗಣಪತಿ ಹೆಗ್ಡೆ ವಹಿಸಿದ್ದರು. ಬಹಳ ಅಚ್ಚುಕಟ್ಟಾಗಿ ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮ ನಡೆದಿದ್ದು, ಅಸಂಖ್ಯಾತ ಭಕ್ತಾದಿಗಳು ಅಗಮಿಸಿ ದೇವರ ಕೃಪೆಗೂ ಪಾತ್ರರಾಗಿದ್ದರು.
ಈ ಘಟನೆಯಿಂದಾಗಿ ಭಕ್ತಸಮೂಹವೇ ಗಾಬರಿಗೊಂಡಿದ್ದು, ಮಹಾಲೇಂಗೇಶ್ವರ ದೇವರು ಮುನಿದರೆ ಎಂಬ ಪ್ರಶ್ನೆಗಳು ಭಕ್ತರಲ್ಲಿ ಸಹಜವಾಗಿ ಕಾಡತೊಡಗಿದೆ.