ಉಡುಪಿ, ಫೆ.02 (DaijiworldNews/AA): ಕುಂದಾಪುರದ ಮಚ್ಚಟ್ಟು ತೊಂಬಟ್ಟುವಿನ ನಕ್ಸಲ್ ಕಾರ್ಯಕರ್ತೆ ಲಕ್ಷ್ಮಿ ಇಂದು ಉಡುಪಿ ಅಥವಾ ಚಿಕ್ಕಮಗಳೂರಿನಲ್ಲಿ ಶರಣಾಗುವ ಸಾಧ್ಯತೆ ಇದೆ.

ಲಕ್ಷ್ಮಿ ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದು, ಈಕೆಯ ವಿರುದ್ಧ ಅಮಾಸೆಬೈಲ್ ಮತ್ತು ಶಂಕರನಾರಾಯಣ ಪೊಲೀಸ್ ಠಾಣೆಗಳಲ್ಲಿ ಮೂರು ಪ್ರಕರಣಗಳಿವೆ.
ಪ್ರಸ್ತುತ ಲಕ್ಷ್ಮಿ ಆಂಧ್ರಪ್ರದೇಶದಲ್ಲಿ ತನ್ನ ಪತಿಯೊಂದಿಗೆ ಸಾಮಾನ್ಯರಂತೆ ವಾಸಿಸುತ್ತಿದ್ದಾರೆ. ಲಕ್ಷ್ಮಿ ಪತಿ ಕೂಡ ನಕ್ಸಲ್ ಆಗಿದ್ದು, ಮುಖ್ಯವಾಹಿನಿಗೆ ಬಂದಿದ್ದರು ಎಂದು ಹೇಳಲಾಗುತ್ತದೆ.
ಲಕ್ಷ್ಮಿ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೂ ಮುಂಡಗಾರು ಲತಾ ಮತ್ತು ವಿಕ್ರಮ್ ಗೌಡರಂತೆ ಹಾರ್ಡ್ಕೋರ್ ನಕ್ಸಲ್ ಎಂದು ಪರಿಗಣಿಸಿರಲಿಲ್ಲ.
ಉನ್ನತ ಮೂಲಗಳ ಪ್ರಕಾರ ಲಕ್ಷ್ಮಿ ಉಡುಪಿಯಲ್ಲಿ ಇಂದು ಶರಣಾಗುವ ಸಾಧ್ಯತೆ ಇದೆ.