ಉಡುಪಿ, ಫೆ.03 (DaijiworldNews/AA): ಉಡುಪಿ ಮತ್ತು ಅಂಗಾರಕಟ್ಟೆ ನಡುವೆ ಫೆಬ್ರವರಿ 3 ರಿಂದ ವಿಸ್ತರಿಸಲಾದ ಸರ್ಕಾರಿ ಬಸ್ ಸೇವೆ ಕಾರ್ಯನಿರ್ವಹಿಸದ ಕಾರಣ ಸಾರ್ವಜನಿಕರು ನಿರಾಸೆಗೊಂಡಿದ್ದಾರೆ.


ಬಸ್ ಅನ್ನು ಸ್ವಾಗತಿಸಲು ಸಾರ್ವಜನಿಕರು ಉತ್ಸುಕರಾಗಿದ್ದರು. ಜೊತೆಗೆ ಬ್ಯಾನರ್ಗಳು ಮತ್ತು ಅಲಂಕಾರಗಳನ್ನು ಮಾಡಲಾಗಿತ್ತು. ಹಾಗೂ ಹೂವುಗಳನ್ನು ಸಿದ್ಧವಾಗಿಡಲಾಗಿತ್ತು. ಆದರೆ ಬಸ್ ಬರದ ಕಾರಣ ಸಾರ್ವಜನಿಕರು ನಿರಾಶೆಗೊಂಡಿದ್ದಾರೆ.
ಮಂಗಳೂರಿನ ಸಂಚಾರ ಆಯುಕ್ತರು ಮತ್ತು ಉಡುಪಿಯ ಬಸ್ ಡಿಪೋ ಮ್ಯಾನೇಜರ್ ದೂರವಾಣಿ ಕರೆಗಳ ಮೂಲಕ ಪ್ರದೇಶದಲ್ಲಿ ಬಸ್ ಸಂಚಾರದ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ತಾಂತ್ರಿಕ ದೋಷದಿಂದಾಗಿ ಬಸ್ ಬರಲಿಲ್ಲ.
ಕೊರೊನಾ ಬಳಿಕ, ಈ ಪ್ರದೇಶದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರಿಗೆ ಬಸ್ ಸೇವೆಗಳ ಅಗತ್ಯ ಹೆಚ್ಚಾಗಿದೆ. ಬಹಳ ಉತ್ಸುಕರಾಗಿದ್ದ ಸಾರ್ಜಜನಿಕರು ಬಸ್ ಅನ್ನು ಸ್ವಾಗತಿಸಲು ಸಿದ್ಧರಾಗಿದ್ದರು. ಆದರೆ ಬಸ್ ಬರದ ಕಾರಣ ನಿರಾಸೆಗೊಂಡಿದ್ದಾರೆ. ಈ ಹಿಂದೆ, ಸ್ಥಳೀಯ ಕಾರ್ಯಕರ್ತರಾದ ಗಣೇಶ್ ರಾಜ್ ಸರಳೆಬೆಟ್ಟು ಮತ್ತು ಕಾಂಗ್ರೆಸ್ ನಾಯಕ ಮೋಹನ್ ದಾಸ್ ನಾಯಕ್ ಪರ್ಕಳ, ಹಾಗೆಯೇ ಸ್ಥಳೀಯ ನಿವಾಸಿಗಳು ಸರ್ಕಾರಿ ಬಸ್ ಸೇವೆಗಾಗಿ ವಿನಂತಿಸಿದ್ದರು. ಮೂಡುಬೆಳ್ಳೆ ಮೂಲಕ ಬಸ್ ಸಂಚರಿಸಲಿದೆ ಎಂದು ಸಹ ತಿಳಿಸಲಾಗಿತ್ತು. ಆದಾಗ್ಯೂ, ಬಸ್ ಬರದ ಕಾರಣ ಸಾರ್ವಜನಿಕರು ನಿರಾಶೆಗೊಂಡಿದ್ದಾರೆ.
ಸಮಾಜ ಸೇವಕ ಗಣೇಶ್ ರಾಜ್ ಸರಳೆಬೆಟ್ಟು ಮಾತನಾಡಿ, "ಉಡುಪಿಯಿಂದ ಅಂಗಾರಕಟ್ಟೆ ಆರೋಗ್ಯ ಕೇಂದ್ರಕ್ಕೆ (ಪ್ರಾಥಮಿಕ ಆರೋಗ್ಯ ಕೇಂದ್ರ) ಬಸ್ ಸಂಚರಿಸಲಿದೆ ಎಂದು ಘೋಷಿಸಲಾಗಿತ್ತು. ಸ್ಥಳೀಯರು ಬಸ್ ಅನ್ನು ಸ್ವಾಗತಿಸಲು ಸಿದ್ಧರಾಗಿದ್ದರು, ಆದರೆ ಡಿಪೋ ಮ್ಯಾನೇಜರ್ ತಿಳಿಸಿದಂತೆ ತಾಂತ್ರಿಕ ದೋಷದಿಂದಾಗಿ ಅದು ಹೊರಡಲಿಲ್ಲ. ಬಸ್ ಪ್ರದೇಶದಲ್ಲಿ ಎರಡು ಬಾರಿ ಸಂಚರಿಸಬೇಕಿತ್ತು. ಬಸ್ ಬೆಳಿಗ್ಗೆ 8.20ಕ್ಕೆ ಬರಬೇಕಿತ್ತು. ಆದರೆ ಅದು ಕಾರ್ಯನಿರ್ವಹಿಸಲು ವಿಫಲವಾಯಿತು. ಈ ಹಿಂದೆ ನಾವು ಪ್ರದೇಶದಲ್ಲಿ ಸರ್ಕಾರಿ ಬಸ್ ಸೇವೆಯನ್ನು ಹೊಂದಬೇಕೆಂದು ವಿನಂತಿಸಿದ್ದೆವು. ಅದರಂತೆ ಮೂಡುಬೆಳ್ಳೆ ಮೂಲಕ ಬಸ್ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು. ಆದರೆ ಬಸ್ ಬರಲಿಲ್ಲ, ಇದು ಸಾರ್ವಜನಿಕರನ್ನು ನಿರಾಶೆಗೊಳಿಸಿತು. ನಾವು ಡಿಪೋ ಮ್ಯಾನೇಜರ್ ಅವರನ್ನು ಸಂಪರ್ಕಿಸಿದಾಗ ಸಿಬ್ಬಂದಿ ಕೊರತೆಯಿಂದಾಗಿ ಬಸ್ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಅವರು ನಮಗೆ ತಿಳಿಸಿದರು. ಪ್ರದೇಶದಲ್ಲಿ ಬಸ್ ಸೇವೆ ನೀಡುವುದು ಸಾಕಾಗುವುದಿಲ್ಲ. ಅದು ಪ್ರತಿದಿನ ಕಾರ್ಯನಿರ್ವಹಿಸಬೇಕು ಮತ್ತು ಸರಿಯಾಗಿ ನಿರ್ವಹಿಸಲ್ಪಡಬೇಕು" ಎಂದು ಹೇಳಿದರು.