ಉಡುಪಿ, ಫೆ.05 (DaijiworldNews/AA): ಫೆಬ್ರವರಿ 3 ರಿಂದ ಸಂಚಾರ ಆರಂಭಿಸಬೇಕಿದ್ದ ಉಡುಪಿ - ಅಂಗಾರಕಟ್ಟೆ ಸರ್ಕಾರಿ ಬಸ್ಸು ಅಂತಿಮವಾಗಿ ಮಂಗಳವಾರದಂದು ಸಂಚಾರ ಆರಂಭಿಸಿತು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಸಿರು ನಿಶಾನೆ ತೋರಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.







ಉಡುಪಿ - ಅಂಗಾರಕಟ್ಟೆ ಮಾರ್ಗದಲ್ಲಿ ಸರ್ಕಾರಿ ಬಸ್ ಸೇವೆಯನ್ನು ಒದಗಿಸುವಂತೆ ಸ್ಥಳೀಯ ನಿವಾಸಿಗಳು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಪ್ರಯತ್ನದಿಂದ ಈ ಮಾರ್ಗದಲ್ಲಿ ಸರ್ಕಾರಿ ಬಸ್ ಸೇವೆ ಪುನರಾರಂಭಗೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಕಾರ್ಯಕ್ರಮದಲ್ಲಿ ಕೋಡಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸಂದೀಪ್ ಮಡಿವಾಳ, ಉಪಾಧ್ಯಕ್ಷೆ ಇಂದಿರಾ ಪೂಜಾರಿ, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಸಾಲಿಯಾನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ಕೋಡಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಅರುಣ್ ಶೆಟ್ಟಿ, ಅನಿಲ್ ಶೆಟ್ಟಿ, ಆಶಾ ಶೆಟ್ಟಿ, ಸಂದೀಪ್, ಸದಾನಂದ ಪ್ರಭು, ಮತ್ತು ಸ್ಥಳೀಯ ನಿವಾಸಿಗಳಾದ ಹೆನ್ರಿ ಡಿ'ಸೋಜಾ, ಮೋಹನ್ ನಾಯಕ್, ದಿನೇಶ್ ಕುಲಾಲ್, ರತ್ನಾಕರ್ ನಾಯಕ್, ರಾಜ್ ಕುಮಾರ್, ಅರುಣ್ ಪೆರ್ಣಂಕಿಲ, ರಾಮಕೃಷ್ಣ ನಾಯಕ್, ಕಿರಣ್ ಶೆಟ್ಟಿ, ಪ್ರತಾಪ್ ಶೆಟ್ಟಿ, ಜಗದೀಶ್ ಶೆಟ್ಟಿ ಮತ್ತು ಮಂಜುನಾಥ್ ನಾಯಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.