ಮಂಗಳೂರು,ಫೆ.06(DaijiworldNews/TA): ಏಕಾಏಕಿ ಒಳರಸ್ತೆಯಿಂದ ಎಲೆಕ್ಟ್ರಿಕ್ ಕಾರೊಂದು ಮುಖ್ಯ ರಸ್ತೆಗೆ ಅತಿ ವೇಗವಾಗಿ ಮುನ್ನುಗ್ಗಿದ ಪರಿಣಾಮ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಹಾಗೂ ಕಾರಿಗೆ ಢಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿರುವ ಘಟನೆ ನಗರದ ರಥಬೀದಿಯ ನ್ಯೂಚಿತ್ರ ಜಂಕ್ಷನ್ನ ಎಸ್ಬಿಐ ಬ್ಯಾಂಕ್ ಬಳಿ ಸಂಭವಿಸಿದೆ.

ಕಾರಿನಲ್ಲಿದ್ದ ಪ್ರವೀಣ್ ಆಚಾರ್ಯ ಹಾಗೂ ದ್ವಿಚಕ್ರ ವಾಹನ ಸವಾರ ಸುರೇಂದ್ರ ಬಗೇಲ್ ಗಾಯಗೊಂಡವರು. ಅಪಘಾತದಲ್ಲಿ ಎರಡು ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನ ಜಖಂಗೊಂಡಿವೆ. ಕಾರು ಚಾಲಕನ ವಿರುದ್ಧ ಮಂಗಳೂರು ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.