ಬಂಟ್ವಾಳ, ಫೆ.08 (DaijiworldNews/AA): ಸುಖಕ್ಕೆ ಪಾಲುದಾರರಿದ್ದಾರೆ, ಆದರೆ ದುಃಖಕ್ಕೆ... ಹತ್ತಿರ ಬರುವವರೂ ಇರುವುದಿಲ್ಲ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರ ಸದ್ಯದ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ.

ಅಂದೊಮ್ಮೆ ಮಹಾಲಿಂಗ ನಾಯ್ಕ್ ಅವರು ತನ್ನ ಸಾಧನೆಗೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದಾಗ ಇಡೀ ಕರುನಾಡೇ ಸಂಭ್ರಮ ಪಟ್ಟಿತ್ತು. ಅವರ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿತ್ತು. ಆದರೆ ಇದೀಗ ಪತ್ನಿಯ ಆಸ್ಪತ್ರೆಯ ವೆಚ್ಚ ಭರಿಸಲಾಗದೆ ನೊಂದುಕೊಂಡಿದ್ದಾರೆ.
ಪ್ರಗತಿಪರ ಕೃಷಿಕರಾಗಿ ದೇಶದ ಅತ್ಯುನ್ನತ ಪ್ರಶಸ್ತಿ 'ಪದ್ಮಶ್ರೀ'ಗೆ ಭಾಜನರಾದ ಅಮೈ ಮಹಾಲಿಂಗ ನಾಯ್ಕರ ಸದ್ಯದ ಪಾಡು ಯಾರೂ ಇಳಿವಯಸ್ಸು ದೇಹದ ಶಕ್ತಿ ಕುಂದಿದೆ. ಕೃಷಿಯ ಉತ್ಪತ್ತಿಯಲ್ಲಿಯೇ ದಿನ ದೂಡುತ್ತಿರುವ ಈ ಸಮಯದಲ್ಲಿಯೇ ಅಮೈ ಅವರ ಪತ್ನಿ ಏಕಾಏಕಿ ತಲೆಯ ನರದ ಸಮಸ್ಯೆಗೆ ತುತ್ತಾಗಿದ್ದಾರೆ. ಮೊದಲಿಗೆ ವಾರಗಳ ಕಾಲ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಅಲ್ಲಿನ ಹೆಚ್ಚಿನ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ.
ಅದರಂತೆ ಕಣ್ಣೂರು ಕೊಡಕ್ಕಲ್ನಲ್ಲಿರುವ ಫಸ್ಟ್ ನ್ಯೂರೊ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಈಗಾಗಲೇ ಕೈಯಲ್ಲಿರುವ ದುಡ್ಡು, ಅವರಿವರಲ್ಲಿ ಕಾಡಿಬೇಡಿ 2.65ಲಕ್ಷ ರೂ. ಚಿಕಿತ್ಸೆಯ ವೆಚ್ಚ ಭರಿಸಿದ್ದಾರೆ. ಇದೀಗ ಮತ್ತೆ ಚಿಕಿತ್ಸೆಯ ವೆಚ್ಚ 2.50ಲಕ್ಷ ರೂಪಾಯಿ ಭರಿಸಬೇಕಿದೆ. ಕೈಯಲ್ಲಿ ಬಿಡಿಗಾಸು ಇಲ್ಲದ ಅಮೈ ಮಹಾಲಿಂಗ ನಾಯ್ಕರು ಇದರಿಂದ ಕಂಗಾಲಾಗಿದ್ದಾರೆ. ಗುಡ್ಡದಲ್ಲೇ ಸುರಂಗ ತೋಡಿ ನೀರಿನ ಕೋಡಿಯನ್ನೇ ಹರಿಸಿದ್ದ ಅಮೈ ಮಹಾಲಿಂಗ ನಾಯ್ಕರು ಆಸ್ಪತ್ರೆ ವೆಚ್ಚ ಭರಿಸಲಾಗದೆ ತೊಂದರೆಗೆ ಒಳಗಾಗಿದ್ದಾರೆ. ದಾನಿಗಳು ಇವರ ಸಹಾಯಕ್ಕೆ ದಾವಿಸಬೇಕಿದೆ. ಪದ್ಮಶ್ರೀ ಪುರಸ್ಕೃತನ ಸಂಕಷ್ಟಕ್ಕೆ ಇಡೀ ತುಳುನಾಡು ಕೈಜೋಡಿಸಬೇಕಾಗಿದೆ.
ಬ್ಯಾಂಕ್ ಖಾತೆಯ ಮಾಹಿತಿ:
ಮಹಾಲಿಂಗ ನಾಯ್ಕ್
ಕೆನರಾ ಬ್ಯಾಂಕ್, ವಿಟ್ಲ
A/C No: 110037237088
IFSC Code: CNRB0010141