ಕಾಸರಗೋಡು,ಫೆ.08(DaijiworldNews/TA): ಪಡನ್ನಾಕ್ಕಾಡ್ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಪಳಯ ಕಡಪ್ಪುರಂ ಮೂಲದ ಆಶಿಕ್ ಮತ್ತು ತನ್ವೀರ್ ಎಂದು ಗುರುತಿಸಲಾಗಿದೆ.



ರಾತ್ರಿ 9.00 ರ ಸುಮಾರಿಗೆ ಈ ಘಟನೆ ನಡೆದಿದೆ. ಕಾಞಂಗಾಡ್ ನಿಂದ ಬರುತ್ತಿದ್ದ ಟ್ರಕ್ ಗೆ ಬೈಕ್ ಡಿಕ್ಕಿ ಹೊಡೆದಿದೆ. ಅಲ್ಲದೆ ಇದೇ ವೇಳೆ ರಸ್ತೆಬದಿಯಲ್ಲಿದ್ದ ಇನ್ನೊಂದು ಟ್ರಕ್ ಗೂ ಡಿಕ್ಕಿಯಾಗಿದೆ ಎನ್ನಲಾಗಿದೆ. ಎರಡೂ ಟ್ರಕ್ ಗಳ ನಡುವೆ ಬೈಕ್ ಸಿಲುಕಿದ್ದು, ಪರಿಣಾಮ ಬೈಕ್ ನಲ್ಲಿದ್ದ ಇಬ್ಬರೂ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಲು ಸಾಧ್ಯವಾಗಲಿಲ್ಲ. ಇಬ್ಬರ ಮೃತದೇಹಗಳನ್ನು ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.