ಕಾರ್ಕಳ, ಫೆ.08 (DaijiworldNews/AK): ವಿಭಜಕ ಮನಃಸ್ಥಿತಿಯ ಆಫ್ ಹಾಗೂ ಹಿಂದು ವಿರೋಧಿ ಕಾಂಗ್ರೆಸ್ ನ ಅಹಮ್ಮಿಕೆಗೆ ಬೇಸತ್ತ ಜನರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸುವಂತೆ ಮಾಡಿದ್ದಾರೆ ಎಂದು ಶಾಸಕ, ಮಾಜಿ ಸಚಿವ ವಿ.ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ವಿಭಜಕ ಮನಃಸ್ಥಿತಿಯ ಆಪ್ ಸರ್ಕಾರ ರಾಷ್ಟ್ರದ ರಾಜಧಾನಿಯಲ್ಲಿ ನೆಲೆ ಕಳೆದುಕೊಂಡಿದೆ. ಸತತ ಮೂರನೇ ಬಾರಿಗೆ ಕಾಂಗ್ರೆಸ್ ಹ್ಯಾಟ್ರಿಕ್ ಶೂನ್ಯ ಸಂಪಾದಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ದೆಹಲಿಯನ್ನು ಆಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ದೃಢ ನಾಯಕತ್ವದಲ್ಲಿ ಈಗ ದೆಹಲಿ ಗದ್ದುಗೆ ಏರಿದ್ದೇವೆ. ಈ ವಿಜಯ ಯಾತ್ರೆ ದೇಶಾದ್ಯಂತ ಮುಂದುವರಿಯುತ್ತದೆ. ಕೆಲವೇ ವರ್ಷದಲ್ಲಿ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಲಿದೆ. ದೆಹಲಿ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ.