ಬಂಟ್ವಾಳ, ಫೆ.10(DaijiworldNews/TA): ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುವ ಶತ ಚಂಡಿಕಾಯಾಗ ಹಾಗೂ ಕುಪ್ಪೆಟ್ಟು ಬರ್ಕೆ ಕರ್ಪೆ ಪ್ರತಿಷ್ಠಾ ಮಹೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ಕಡೆಗುಂಡ್ಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಳಲಿಯಲ್ಲಿ ನಡೆದ ಬ್ರಹ್ಮಕಲಶೋತ್ಸವದ ರೀತಿಯಲ್ಲಿ ಶತಚಂಡಿಕಾಯಾಗಕ್ಕೂ ಭಕ್ತಾದಿಗಳು ಸಹಕಾರ ನೀಡಬೇಕೆಂದು ಹೇಳಿದ್ದಾರೆ.

ಬ್ರಹ್ಮಕಲಶದ ರೀತಿಯಲ್ಲಿ ಚಂಡಿಕಾಯಾಗ ಕೂಡ ವ್ಯವಸ್ಥಿತವಾಗಿ ನಡೆಯಲು ಭಕ್ತಾದಿಗಳ ಸಹಕಾರ ಕೋರಿದರು. ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನದ ಹೊರೆಕಾಣಿಕೆಯೂ ಫೆಬ್ರವರಿ 16ರಂದು ಕಡೆಗುಂಡ್ಯ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಡಲಿದ್ದು ಹಾಗೂ ಶತಚಂಡಿಕಾಯಾಗದ ಹೊರೆಕಾಣಿಕೆ ಮಾರ್ಚ್ 4ನೇ ತಾರಿಖೀನಂದು ಹೊರಡಲಿದೆ ಎಂದರು.
ಸಭೆಯಲ್ಲಿ ಮುತ್ತೂರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವಾ, ರಾಜಶೇಖರ್ ಮಾರ್ಲ ಮುತ್ತೂರು, ಚರಣ್ ಬಂಡಾರಿ ಮೊಗರು ಹಾಗೂ ಮುತ್ತೂರು ಪಂಚಾಯತ್ ಸದಸ್ಯ ಸತೀಶ್ ಬಳ್ಳಾಜೆ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.