ಮಂಗಳೂರು, ಫೆ.11(DaijiworldNews/TA): ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ಮಂಗಳೂರು ಇದರ ಸಂದೇಶ ಪ್ರಶಸ್ತಿ 2025 ಪ್ರಧಾನ ಕಾರ್ಯಕ್ರಮ ಮಂಗಳೂರಿನ ನಂತೂರು ಬಜ್ಜೋಡಿಯ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧನರಾದ ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿಯ ಡಾ. ನಾ ಡಿಸೋಜ ಅವರ ಭಾವಚಿತ್ರಕ್ಕೆ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಫಾ. ಫ್ರಾನ್ಸಿಸ್ ಸೆರಾವೋ ಎಸ್ ಜೆ, ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಫಾ. ಲಾರೆನ್ಸ್ ಮುಕ್ಕುಯಿ, ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ನಟ ಮತ್ತು ರಂಗಕರ್ಮಿ ಟಿ.ಎಸ್ ನಾಗಾಭರಣ, ಇತರ ಗಣ್ಯರು ಸೇರಿ ಪುಷ್ಪಾರ್ಚಣೆ ಮಾಡಿದರು.
ಈ ಸಂದರ್ಭದಲ್ಲಿ ಈ ಬಾರಿಯ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿಯನ್ನು ಬಿ ಆರ್ ಲಕ್ಷ್ಮಣರಾವ್, ಕೊಂಕಣಿ ಸಂದೇಶ ಪ್ರಶಸ್ತಿಯನ್ನು ಐರಿನ್ ಪಿಂಟೊ, ತುಳು ಸಂದೇಶ ಸಾಹಿತ್ಯ ಪ್ರಶಸ್ತಿಯನ್ನು ಡಾ.ಗಣೇಶ್ ಅಮೀನ್ ಸಂಕಮಾರ್, ಸಂದೇಶ ಮಾಧ್ಯಮ ಪ್ರಶಸ್ತಿಯನ್ನು ಡಿ.ವಿ ರಾಜಶೇಖರ್, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ ರೋಷನ್ ಡಿಸೋಜ, ಸಂದೇಶ ಕಲಾ ಪ್ರಶಸ್ತಿಯನ್ನು ಗಿರೀಶ್ ಕಾಸರವಳ್ಳಿ, ಸಂದೇಶ ಶಿಕ್ಷಣ ಪ್ರಶಸ್ತಿಯನ್ನು ಡಾ. ಯೆನಪೋಯ ಅಬ್ದುಲ್ಲ ಕುಂಞ, ಸಂದೇಶ ವಿಶೇಷ ಪ್ರಶಸ್ತಿಯನ್ನು ಡಾ.ಕೆ ವಿ ರಾವ್ ಅವರಿಗೆ ನೀಡಲಾಯಿತು.
ಇನ್ನೂ ಸಂದೇಶ ವಿಶೇಷ ಗೌರವ ಪ್ರಶಸ್ತಿಯನ್ನು ಮಾನವೀಯ ಸೇವೆ ಮತ್ತು ದಾನವನ್ನು ಗುರುತಿಸಿ ಮೈಕಲ್ ಡಿಸೋಜ, ಸಂದೇಶ ಪ್ರತಿಭಾ ಪ್ರಶಸ್ತಿ ಭರತನಾಟ್ಯದಲ್ಲಿ ಅಪೂರ್ವ ಸಾಧನೆಗೈದ ಕುಮಾರಿ ರೆಮೋನ ಇವೆಟ್ ಪಿರೇರಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ಡಾ. ಫಾ ಸುದೀಪ್ ಪೌಲ್, ಸಂದೇಶ ಪ್ರತಿಷ್ಠಾನದ ವಿಶ್ವಸ್ಥರಾದ ರಾಯ್ ಕ್ಯಾಸ್ಟೆಲಿನೊ, ಫಾ. ಐವನ್ ಪಿಂಟೊ, ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾದ ಡಾ. ನಾ ದಾಮೋದರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.