ಕಾಸರಗೋಡು,ಫೆ.11 (DaijiworldNews/AK): ಮನೆಯಲ್ಲಿ ದಾಸ್ತಾನಿಡಲಾಗಿದ್ದ ಸುಮಾರು ಎಂಟು ಸಾವಿರ ರೂ.ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ಗಳನ್ನು ಕಾಸರಗೋಡು ಡಿ ವೈ ಎಸ್ಪಿ ಸುನಿಲ್ ಕುಮಾರ್ ನೇತೃತ್ವದ ಪೊಲೀಸರು ವಶಕ್ಕೆ ತೆಗೆದುಕೊಂಡು ಓರ್ವ ನನ್ನು ಬಂಧಿಸಿದ್ದಾರೆ.

ಇರ್ಫಾನ್ ಅಬ್ದುಲ್ ಖಾದರ್ ( 33) ಬಂಧಿತ ಆರೋಪಿ.ಕೂಡ್ಲು ಕಾಳ್ಯಾಂಗಾಡ್ ನ ಮನೆಯೊಂದರಿಂದ ಈ ತಂಬಾಕು ವಸ್ತು ವನ್ನು ವಶಪಡಿಸಿ ಕೊಳ್ಳಲಾಗಿದೆ. ಖಚಿತ ಮಾಹಿತಿಯಂತೆ ನಡೆಸಿದ ತಪಾಸಣೆಯಿಂದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಮಂಚದಡಿಯಲ್ಲಿ ಗೋಣಿ ಯಲ್ಲಿ ಬಚ್ಚಿಡಲಾಗಿತ್ತು. ನಗರದ ಹಲವೆಡೆ ಈತ ಸರಬರಾಜು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ