ಉಡುಪಿ,ಫೆ.11 (DaijiworldNews/AK): ಉಡುಪಿ ನಗರದ ಅಂಬಾಗಿಲು- ಪೆರಂಪಳ್ಳಿ ರಸ್ತೆಯ ಸಂತೋಷ್ ನಗರದಲ್ಲಿ ಗುಜರಿ ಅಂಗಡಿಯ ಗೋಡೌನ್ ನಲ್ಲಿ ಬೆಂಕಿ ಅವಘಡ ನಡೆದಿದೆ.

ಹನಿಫ್ ಎಂಬರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಘಟನೆ ನಡೆದಿದೆ. ಆಕಸ್ಮಿಕ ಕಾಣಿಸಿಕೊಂಡ ಬೆಂಕಿ ತೀವ್ರಗೊಂಡಿದ್ದು ಅಪಾರ ಹಾನಿಯಾಗಿದ್ದು, ಅಕ್ಕ ಪಕ್ಕದ ಮನೆಯವರನ್ನು ತೆರವು ಮಾಡಿ ಸ್ಥಳೀಯರು, ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಪ್ರಕ್ರಿಯೆ ನಡೆದಿದೆ.
ಭಾರೀ ಬೆಂಕಿಗೆ ಇಡೀ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿದೆ. ಸುತ್ತಮುತ್ತಲು ಮನೆಗಳು ಇರುವುದರಿಂದ ಸುತ್ತಮುತ್ತಲ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.ಅಕ್ಕ ಪಕ್ಕದ ಮನೆಯವರನ್ನು ಅಗ್ನಿಶಾಮಕ ದಳದವರು ತೆರವು ಮಾಡಿದ್ದಾರೆ .