ಉಡುಪಿ, ಫೆ.12 (DaijiworldNews/AK):ಉದ್ಯಾವರದ ಕೆನರಾ ಬ್ಯಾಂಕ್ನಲ್ಲಿ ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಮೂವರು ಮುಸುಕುಧಾರಿ ದುಷ್ಕರ್ಮಿಗಳು ಎಟಿಎಂ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ಆದರೆ, ಎಟಿಎಂನ ಆಂತರಿಕ ಸೈರನ್ ಸಕ್ರಿಯಗೊಂಡಾಗ ಅವರ ಯೋಜನೆ ವಿಫಲವಾಗಿದ್ದು, ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ.


ಘಟನೆ ಬಳಿಕ ಬೆರಳಚ್ಚು ತಜ್ಞರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿರುವ ಪೊಲೀಸರು ಸುತ್ತಮುತ್ತಲ ಠಾಣಾ ವ್ಯಾಪ್ತಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ