ಉಡುಪಿ,ಫೆ.12 (DaijiworldNews/AK): ಪ್ರತಿಯೊಬ್ಬರಿಗೂ ಅವರದೇ ಆದ ಗೌರವವನ್ನು ಸಂವಿಧಾನ ನೀಡಿದೆ ಅದನ್ನು ರಕ್ಷಣೆ ಮಾಡಬೇಕಾದ್ದು ನಮ್ಮೆಲ್ಲರ ಕರ್ತವ್ಯ ಅದರಲ್ಲೂ ಅಧಿಕಾರಿಗಳು ಸಂವಿಧಾನ ನೀಡಿದ ಹಕ್ಕನ್ನು ಚಲಾಯಿಸುತ್ತಾರೆ ಮಾತ್ರವಲ್ಲ ಭದ್ರಾವತಿ ಶಾಸಕ ಸಂಗಮೇಶ್ ಪುತ್ರ ಅವಹೇಳನ ಮಾತು ಘಟನೆ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.

ಅವರು ಈ ಬಗ್ಗೆ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಪ್ರತಿಯೊಬ್ಬರಿಗೂ ಅವರದೇ ಆದ ಗೌರವವನ್ನು ಸಂವಿಧಾನ ನೀಡಿದೆ ಅದನ್ನು ರಕ್ಷಣೆ ಮಾಡಬೇಕಾದ್ದು ನಮ್ಮೆಲ್ಲರ ಕರ್ತವ್ಯ, ಅದರಲ್ಲೂ ಅಧಿಕಾರಿಗಳು ಸಂವಿಧಾನ ನೀಡಿದ ಹಕ್ಕನ್ನು ಚಲಾಯಿಸುತ್ತಾರೆ.ಯಾರೇ ಆದರೂ ಅದನ್ನು ಅಡ್ಡಿಪಡಿಸುವುದು ಸರಿಯಲ್ಲ. ಚುನಾಯಿತ ಪ್ರತಿನಿಧಿಯಾಗಲಿ ಪ್ರಜೆಯಾಗಲಿ ಯಾರೂ ಕೂಡ ಅಡ್ಡಿಪಡಿಸುವುದು ಸರಿಯಲ್ಲ ಎಂದರು.
ಆ ರೀತಿ ಹೇಳಿಕೆ ನೀಡಿದ್ದರೆ ಅದನ್ನು ಖಂಡಿಸುತ್ತೇವೆ. ವೈಯಕ್ತಿಕವಾಗಿ ಮತ್ತು ಪಕ್ಷದ ನೆಲೆಯಲ್ಲಿ ಇದನ್ನು ಖಂಡಿಸುತ್ತೇನೆ.ಅಧಿಕಾರಿಗಳಿಗೆ ಕರ್ತವ್ಯ ಮಾಡಲು ಅಡಚಣೆ ಮಾಡುವುದು ಸರಿಯಲ್ಲ. ತಪ್ಪುಗಳಿದ್ದರೆ ಮೇಲಾಧಿಕಾರಿಗಳಿಗೆ ತಿಳಿಸಬಹುದು. ಅಧಿಕಾರ ಪ್ರತಿಯೊಬ್ಬ ಪ್ರಜೆಗೂ ಇದೆ.ಶಾಸಕ ಶಾಸಕನ ಪುತ್ರ ಅಂತ ನಾನು ಹೇಳುತ್ತಿಲ್ಲ ಯಾರೇ ಆಗಿರಲಿ, ಶಾಸಕ ಅಥವಾ ಶಾಸಕನ ಪುತ್ರನಿಗೆ ಕಾನೂನಿನಲ್ಲಿ ಪ್ರತ್ಯೇಕ ಅವಕಾಶ ಇಲ್ಲ ಎಲ್ಲರೂ ಒಂದೇ ಯಾವುದೇ ತಪ್ಪಾಗಿದ್ದರೆ ನಾನು ಖಂಡಿಸುತ್ತೇನೆ ಎಂದರು .
ಮೈಸೂರು ಉದಯಗಿರಿ ಪ್ರಕರಣ ವಿಚಾರವಾಗಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೊಲೀಸ್ ಠಾಣೆಗೆ ಕಲ್ಲುತೂರಾಟ ಆಗುತ್ತೆ ಎಂದಿರುವ ಬಿಜೆಪಿ. ಬಿಜೆಪಿ ಅಧಿಕಾರದಲ್ಲಿದ್ದಾಗ ಮಣಿಪುರದಲ್ಲಿ ಘಟನೆ ನಡೆದಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಮಣಿಪುರದ ರೀತಿಯ ಘಟನೆ ನಡೆಯುತ್ತೆ ಎಂದು ನಾವು ಹೇಳಬಹುದಾ? ಎರಡು ವರ್ಷದಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಈಗ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ಕೊಟ್ಟಿದ್ದಾರೆ. ಅದಕ್ಕೆ ಮೊದಲು ಬಿಜೆಪಿ ಉತ್ತರ ಕೊಡಲಿ... ಆಮೇಲೆ ಮೈಸೂರು ವಿಚಾರ ನೋಡೋಣ ಎಂದು ತಿರುಗೇಟು ನೀಡಿದರು