ಮಂಗಳೂರು, ಫೆ.12 (DaijiworldNews/AA): ಫೆರ್ನಾಂಡಿಸ್ ಗ್ರೂಪ್ನ ಭಾಗವಾದ ಬಂಟಕಲ್ನ ರುಚಿಕ್ ಮಲ್ಟಿಕ್ಯೂಷಿನ್ ಫ್ಯಾಮಿಲಿ ರೆಸ್ಟೋರೆಂಟ್ ಆಯೋಜಿಸಿದ್ದ "ಗೋವಾ ಫುಡ್ ಫೆಸ್ಟಿವಲ್ 2025" ಫೆಬ್ರವರಿ 11 ರಂದು ಅದ್ದೂರಿಯಾಗಿ ಉದ್ಘಾಟನೆಗೊಂಡಿತು.

















ಎಂಎಲ್ಸಿ ಐವನ್ ಡಿ'ಸೋಜಾ, ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಬಿಜೆಪಿ ನಾಯಕ ಜಗದೀಶ್ ಅಧಿಕಾರಿ, ಮಾಜಿ ಡಿವೈಎಸ್ಪಿ ವ್ಯಾಲೆಂಟೈನ್ ಡಿ'ಸೋಜಾ ಮತ್ತು ಉದ್ಯಮಿ ರಾನ್ಸ್ ಲಂಡನ್, ರುಚಿಕ್ ಮಲ್ಟಿಕ್ಯೂಷಿನ್ ಫ್ಯಾಮಿಲಿ ರೆಸ್ಟೋರೆಂಟ್ನ ಮಾಲೀಕರಾದ ವಿಲ್ಸನ್ ಫೆರ್ನಾಂಡಿಸ್ ಮತ್ತು ಲೀನಾ ಫೆರ್ನಾಂಡಿಸ್ ಅವರು ಫುಡ್ ಫೆಸ್ಟಿವಲ್ ಅನ್ನು ಉದ್ಘಾಟಿಸಿದರು.
ಗೋವನ್ ಫುಡ್ ಫೆಸ್ಟಿವಲ್ ಫೆಬ್ರವರಿ 12, 13 ಮತ್ತು 14 ರಂದು ಸಂಜೆ 6:30 ರಿಂದ ರಾತ್ರಿ 11:30 ರವರೆಗೆ ನಡೆಯಲಿದೆ. ಈ ಫುಡ್ ಫೆಸ್ಟಿವಲ್ ನಲ್ಲಿ ಬಾಯಲ್ಲಿ ನೀರೂರಿಸುವ ಗೋವನ್ ಖಾದ್ಯಗಳನ್ನು ಬಡಿಸಲಾಗುತ್ತದೆ. ಪುಡ್ ಫೆಸ್ಟಿವಲ್ ನ ಮೆರಗನ್ನು ಗೋವನ್ ಡಿಜೆ ಮತ್ತು ಬ್ಯಾಂಡ್ ಹೆಚ್ಚಿಸಲಿದೆ. ಜೊತೆಗೆ ಫನ್ ಗೇಮ್ಸ್ ಹಾಗೂ ಮನರಂಜನೆ ಇರಲಿದೆ.
ಫುಡ್ ಫೆಸ್ಟಿವಲ್ ಅನ್ನು ಉದ್ಘಾಟಿಸಿ ಮಾತನಾಡಿದ ಎಂಎಲ್ಸಿ ಐವನ್ ಡಿ'ಸೋಜಾ, "ವಿಲ್ಸನ್ ಫೆರ್ನಾಂಡಿಸ್ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಆಹಾರ ಉದ್ಯಮವು ಸಾಕಷ್ಟು ಅವಕಾಶಗಳನ್ನು ಹೊಂದಿದೆ ಎಂದು ಅವರು ಅರಿತುಕೊಂಡರು. ಹೀಗಾಗಿ ಅವರು ರುಚಿಕ್ ಮಲ್ಟಿಕ್ಯೂಷಿನ್ ಫ್ಯಾಮಿಲಿ ರೆಸ್ಟೋರೆಂಟ್ ಅನ್ನು ಪರಿಚಯಿಸಿದರು. ಕೊಂಕಣಿ ಭಾಷೆಯಲ್ಲಿ ರುಚಿಕ್ ಎಂದರೆ ರುಚಿಕರವಾದದ್ದು. ಹೀಗಾಗಿ ಈ ರೆಸ್ಟೋರೆಂಟ್ ಮೂಲಕ ಅವರು ಗೋವನ್ ಫುಡ್ ಫೆಸ್ಟಿವಲ್ ಅನ್ನು ಆಯೋಜಿಸಿದ್ದಾರೆ. ಇಂತಹ ಕಾರ್ಯಕ್ರಮವನ್ನು ಉಡುಪಿ ಮತ್ತು ಮಂಗಳೂರಿನ ನಗರ ಕೇಂದ್ರಗಳಲ್ಲಿ ಆಯೋಜಿಸಿದ್ದರೆ, ಹೆಚ್ಚಿನ ಜನಸಂದಣಿ ಸೇರುತ್ತಿತ್ತು. ನಮ್ಮ ಮೊದಲ ಆದ್ಯತೆ ಯಾವಾಗಲೂ ಆಹಾರ, ಮತ್ತು ಆಹಾರವನ್ನು ವೈಯಕ್ತಿಕ ಆಯ್ಕೆಗೆ ಬಿಡಲಾಗುತ್ತದೆ. ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಆಹಾರ ಸಂಸ್ಕೃತಿ ಇದೆ. ಭಾರತದಲ್ಲಿ ಪ್ರತಿ ಗ್ರಾಮಕ್ಕೂ ವಿಭಿನ್ನ ಆಹಾರ ಸಂಸ್ಕೃತಿ ಇದೆ. ಗೋವಾ ಆಹಾರವು ಜಗತ್ತಿನಾದ್ಯಂತ ಗುರುತಿಸಲ್ಪಟ್ಟಿದೆ. ಇದು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸಿದೆ. ಮಂಗಳೂರು ಮತ್ತು ಕರಾವಳಿ ಭಾಗ ತನ್ನ ಮೀನು ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಬಂಟಕಲ್ನಲ್ಲಿ ಈ ಆಹಾರ ಹಬ್ಬವನ್ನು ಆಯೋಜಿಸುವ ಧೈರ್ಯಕ್ಕಾಗಿ ನಾನು ವಿಲ್ಸನ್ ಅವರನ್ನು ಅಭಿನಂದಿಸುತ್ತೇನೆ. ಆಹಾರ ಉದ್ಯಮವು ಎಂದಿಗೂ ಮುಚ್ಚುವುದಿಲ್ಲ" ಎಂದರು.
ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ವಾಲ್ಟರ್ ನಂದಳಿಕೆ ಆಹಾರ ಹಬ್ಬಕ್ಕೆ ಶುಭ ಹಾರೈಸುತ್ತಾ, "ಈ ಹಬ್ಬವನ್ನು ವಾರಾಂತ್ಯದವರೆಗೆ ವಿಸ್ತರಿಸಿದರೆ, ಇದು ಭವ್ಯ ಯಶಸ್ಸನ್ನು ಕಾಣುತ್ತದೆ. ಬಂಟಕಲ್ಗೆ ಹೊಸ ಸಂಸ್ಥೆ ಮತ್ತು ಚಾಲನೆಯಲ್ಲಿರುವ ಸಂಸ್ಥೆಯನ್ನು ತರುವ ವಿಲ್ಸನ್ ಫೆರ್ನಾಂಡಿಸ್ ಅವರ ಆಲೋಚನೆಗಳಿಗೆ ನಾನು ಶುಭ ಹಾರೈಸುತ್ತೇನೆ. ಇಲ್ಲಿ ಆನಂದಿಸಲು ಸಾಕಷ್ಟು ಅವಕಾಶವಿದೆ. ಈ ಸಂಸ್ಥೆ ಬೆಳೆಯಲಿ ಅದಕ್ಕೆ ನಮ್ಮ ಬೆಂಬಲವಿದೆ" ಎಂದು ಹೇಳಿದರು.
ಜಗದೀಶ್ ಅಧಿಕಾರಿ ಮಾತನಾಡಿ, "ಈ ಫುಡ್ ಫೆಸ್ಟ್ ಅನ್ನು ಆಯೋಜಿಸುವ ಉದ್ದೇಶ ಕೇವಲ ಹಣ ಸಂಪಾದಿಸುವುದಲ್ಲ. ಒಳ್ಳೆಯ ಆಹಾರವನ್ನು ಪರಿಚಯಿಸಲು ಈ ಆಹಾರ ಹಬ್ಬವನ್ನು ಆಯೋಜಿಸಲಾಗಿದೆ. ವಿಲ್ಸನ್ ನನ್ನ ಬಹಳ ದಿನಗಳ ಸ್ನೇಹಿತ, ಅವರ ಹೊಸ ಆಲೋಚನೆಗಳಿಗೆ ನಾನು ಶುಭ ಹಾರೈಸುತ್ತೇನೆ" ಎಂದು ತಿಳಿಸಿದರು.
ವ್ಯಾಲೆಂಟೈನ್ ಡಿ'ಸೋಜಾ ಮಾತನಾಡಿ, "ಕೆಲವು ತಿಂಗಳ ಹಿಂದೆ ನಾನು ಈ ಸ್ಥಳಕ್ಕೆ ಭೇಟಿ ನೀಡಿದಾಗ ಅದು ತುಂಬಾ ಕೆಟ್ಟ ಸ್ಥಿತಿಯಲ್ಲಿತ್ತು. ಆದರೆ ಇಂದು ಈ ಸ್ಥಳವು ಸಂಪೂರ್ಣವಾಗಿ ವಿಭಿನ್ನವಾಗಿ ಮಾರ್ಪಟ್ಟಿದೆ. ನಾನು ಕಾರವಾರದಲ್ಲಿ ಕೆಲಸ ಮಾಡುತ್ತಿದ್ದೆ ಮತ್ತು ನಾನು ಕೆಲವೊಮ್ಮೆ ರುಚಿಕರವಾದ ಆಹಾರಕ್ಕಾಗಿ ಗೋವಾಕ್ಕೆ ಹೋಗುತ್ತಿದ್ದೆ. ಆದರೆ ಇಂದು ರುಚಿಕ್ ಮಲ್ಟಿಕ್ಯೂಷಿನ್ ರೆಸ್ಟೋರೆಂಟ್ ಇಲ್ಲಿ ರುಚಿಕರವಾದ ಆಹಾರವನ್ನು ಬಡಿಸುತ್ತಿದೆ" ಎಂದರು.
ರಾನ್ ರೊಡ್ರಿಗಸ್ ಲಂಡನ್ ಕೂಡ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿಜೆ ಡಿಕ್ಸನ್ ಕಾರ್ಯಕ್ರಮವನ್ನು ನಿರೂಪಿಸಿದರು. ಗೋವನ್ ಬ್ಯಾಂಡ್, ಗೋವನ್ ಹಾಡುಗಳು ಮತ್ತು ಗೋವನ್ ಡಿಜೆ ಪ್ರೇಕ್ಷಕರನ್ನು ರಂಜಿಸಿದರು. ಜೊತೆಗೆ ಉತ್ತಮ ಗುಣಮಟ್ಟದ ಮತ್ತು ರುಚಿಕರವಾದ ಗೋವನ್ ಪಾಕಪದ್ಧತಿಯನ್ನು ಬಡಿಸಲಾಯಿತು.