ಉಳ್ಳಾಲ, ಫೆ.13 (DaijiworldNews/AK): ಚಾಲಕನ ಧಾವಂತಕ್ಕೆ ಜೀಪೊಂದು ಕೇರಳ ಸಾರಿಗೆ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದು ಬಳಿಕ ಎಡ ಭಾಗದಿಂದ ಸಾಗುತ್ತಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಆಡಂಕುದ್ರು ಎಂಬಲ್ಲಿ ಸಂಜೆ ವೇಳೆ ಸಂಭಾವಿಸಿದೆ.



ಬೈಕ್ ಸವಾರರಿ ಬ್ಬರೂ ಗಾಯಗೊಂಡಿದ್ದಾರೆ.ಮಂಗಳೂರು ಕಡೆಯಿಂದ ಕಾಸರಗೋಡು ಕಡೆಗೆ ಚಲಿಸುತ್ತಿದ್ದ ಕೇರಳ ಸಾರಿಗೆ ಬಸ್ಸಿನ ಹಿಂಬದಿಗೆ, ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆ ನಡೆಸಿದ ಜೀಪ್ ಚಾಲಕ ನಿಯಂತ್ರಣ ತಪ್ಪಿ ಗುದ್ದಿದ್ದಾನೆ. ಅಲ್ಲಿಂದ ಮತ್ತೆ ಎಡ ಭಾಗಕ್ಕೆ ತಿರುಗಿಸಿದ ಪರಿಣಾಮ ಸವಾರರಿಬ್ಬರು ತೆರಳುತ್ತಿದ್ದ ಬೈಕಿಗೆ ಜೀಪ್ ಡಿಕ್ಕಿ ಹೊಡೆದು ಬಳಿಕ ಕಂದಕಕ್ಕೆ ಉರುಳಿದೆ.
ಘಟನೆಯಿಂದ ರಾ. ಹೆಯಲ್ಲಿ ಕೆಲವು ಘಂಟೆಗಳ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಾಸ ಉಂಟಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ