ಕಾಸರಗೋಡು, ಫೆ.14 (DaijiworldNews/AK):ಜಿಲ್ಲೆಯಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿ ಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಆರ್. ಡಿ ನಗರ ಬಟ್ಟಂಪಾರೆಯ ಮಹೇಶ್ .ಕೆ. (31) ಬಂಧಿತ ಆರೋಪಿ. ಕಾಸರಗೋಡು, ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ. ಹಲವು ವರ್ಷಗಳಿಂದ ಗಲಭೆ, ಹಲ್ಲೆ , ಕೊಲೆ ಯತ್ನ ಹಾಗೂ ಲೂಟಿ ಹೀಗೆ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ.