ಮಂಗಳೂರು,ಫೆ.17 (DaijiworldNews/AK): ಅಕ್ರಮ ಮರಳುಗಾರಿಕೆ ನಡೆಸುವವರ ವಿರುದ್ಧ ಎಲ್ಲರೂ ಕೈಜೋಡಿಸಿದರೆ ಸಮಸ್ಯೆ ಸರಿಪಡಿಸಲು ಸಾಧ್ಯ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಹಲವೆಡೆ ನದಿಗಳಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಒಂದು ಕಡೆ ಮರಳಿಗೆ ಅತ್ಯಧಿಕ ಬೇಡಿಕೆ ಇದೆ. ಆದರೆ ಅಧಿಕೃತವಾಗಿ ಮರಳು ತೆಗೆದುಕೊಳ್ಳಲು ಅವಕಾಶ ನೀಡಿದ್ದರೂ ಕೂಡ ಆ ರೀತಿಯಿಂದ ಪಡೆಯಲು ಹೋಗುತ್ತಿಲ್ಲ. ಹಾಗಾಗಿ ಸುಲಭವಾಗಿ ಸಿಗುವ ಮರಳಿನ ಮೇಲೆ ಎಲ್ಲರ ಕಣ್ಣು ಎಂದು ಹೇಳಿದರು.
ಮರಳುಗಾರಿಕೆ ವಿರುದ್ಧ ಎಲ್ಲರೂ ಕೈಜೋಡಿಸಿದರೆ ಸಮಸ್ಯೆ ಸರಿಪಡಿಸಲು ಸಾಧ್ಯವಿದೆ. ಕೆಡಿಪಿ ಸಭೆಯಲ್ಲೂ ಈ ವಿಚಾರದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ. ಸೇತುವೆಗಳ ಬಳಿಯ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದರಿಂದ ಕೋಟ್ಯಾಂತರ ರೂ. ನಷ್ಟ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು.