ಮಂಗಳೂರು, ಫೆ.17 (DaijiworldNews/AA): ಹಣವನ್ನು ಪಣವಾಗಿ ಇರಿಸಿಕೊಂಡು ಜುಗಾರಿ ಆಟವಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳಾದ ಯತೀಶ್, ಕೇಶವ, ದಯಾನಂದ್, ಶಿಲಾಸ್ ಶೆಟ್ಟಿ, ಚೇತನ್, ದಯಾನಂದ್, ನಿತಿನ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಂಡಂತಿಲ ಗ್ರಾಮದ ಪಡು ಎಂಬಲ್ಲಿ ಫೆಬ್ರವರಿ 16 ರಂದು ಖಾಲಿ ಜಾಗದಲ್ಲಿನ ಮರದ ಅಡಿಯಲ್ಲಿ ಹಣವನ್ನು ಪಣವಾಗಿ ಇರಿಸಿಕೊಂಡು ಇಸ್ಪೀಟ್ ಎಲೆಗಳಿಂದ ಜುಗಾರಿ ಆಟ ಆಡುತ್ತಿದ್ದವರ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶಿವಕುಮಾರ್ ಕೆ ಆರ್ ರವರ ನಿರ್ದೇಶನದಂತೆ ಪೊಲೀಸ್ ಉಪ ನಿರೀಕ್ಷಕ ಅರುಣ್ ಕುಮಾರ್ ಡಿ ಮತ್ತು ಸಿಬ್ಬಂದಿಗಳು ದಾಳಿ ಮಾಡಿದರು.
ಆರೋಪಿತರ ವಶದಲ್ಲಿದ್ದ 8,300 ರೂ. ಹಣವನ್ನು ವಶಪಡಿಸಿಕೊಂಡು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಲಾಗಿದೆ.