ಮಂಗಳೂರು, ಫೆ.18 (DaijiworldNews/AK):ಖ್ಯಾತ ಫೋಟೋ ಜರ್ನಲಿಸ್ಟ್ ದಯಾನಂದ ಕುಮಾರ್ ಕುಕ್ಕಾಜೆ ಅವರಿಗೆ "ಡಬಲ್ ಪಿಕ್ಸೆಲ್ ನ್ಯಾಷನಲ್ ಸಲೂನ್ 2025" ಛಾಯಾಗ್ರಹಣ ಸ್ಪರ್ಧೆಯಲ್ಲಿ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.





ಫೊಟೋಜರ್ನಲಿಸಂ ವಿಭಾಗದಲ್ಲಿ ಹೆಲ್ಪ್ ಲೆಸ್ ಹ್ಯಾಂಡ್ ಶೀರ್ಷಿಕೆಯಡಿ ಸೆರೆ ಹಿಡಿದ ಛಾಯಾಗ್ರಹಣಕ್ಕೆ ಪಿ ಎಂ ಪಿ ಸಿಲ್ವರ್ ಅವಾರ್ಡ್ ಹಾಗೂ ಓಪನ್ ಮೊನೋಕ್ರೋಮ್ ವಿಭಾಗದಲ್ಲಿ ಬ್ರೈಟ್ ಪ್ಯೂಚರ್ ಶೀರ್ಷಿಕೆಯಡಿ ಸೆರೆಹಿಡಿದ ಛಾಯಾಗ್ರಹಣವು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.
ಮಂಗಳೂರಿನ ಹಿರಿಯ ಛಾಯಾಗ್ರಾಹಕರಾದ ದಯಾನಂದ ಕುಕ್ಕಾಜೆ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ಗುರುತಿಸಲ್ಪಟ್ಟಿದ್ದಾರೆ.ಅವರು ಕಳೆದ 23 ವರ್ಷಗಳಿಂದ ದಾಯ್ಜಿ ವರ್ಲ್ಡ್ ಮೀಡಿಯಾ ಸಂಸ್ಥೆಯಲ್ಲಿ ಫೋಟೋ ಜರ್ನಲಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.