ಮಂಗಳೂರು, ಫೆ.20 (DaijiworldNews/AK):ರಂಗ ಸಂಗಾತಿ ಪ್ರತಿಷ್ಠಾನದ ವತಿಯಿಂದ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಫೆಬ್ರವರಿ 14ರಂದು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್ಮೆಂಟ್ ಕಾಲೇಜಿನ ಪ್ರೊ. ಅಕ್ಷಯ ಆರ್. ಶೆಟ್ಟಿ ಅವರ ಕಥಾ ಸಂಕಲನ ಅವಳೆಂದರೆ ಬರಿ ಹೆಣ್ಣೆ ಕೃತಿ ಲೋಕಾರ್ಪಣೆಗೊಂಡಿತು.

ಕೃತಿ ಅನಾವರಣವನ್ನು ಶ್ರೀಮತಿ ಭಾರತಿ ಎಚ್. ಶೆಟ್ಟಿ ನೆರವೇರಿಸಿದರು. ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ನ ಡಾ. ಸುಧಾರಾಣಿ ಕೃತಿಯನ್ನು ಪರಿಚಯಿಸಿದರು. ರಂಗ ಸಂಗಾತಿ ಪ್ರತಿಷ್ಠಾನದ ಶ್ರೀ ಶಶಿರಾಜ್ ರಾವ್ ಕಾವೂರು, ಲೇಖಕಿ ಅಕ್ಷತ ರಾಜ್ ಪೆರ್ಲ, ಪ್ರೊ. ಅಕ್ಷಯ ಆರ್. ಶೆಟ್ಟಿ ಉಪಸ್ಥಿತರಿದ್ದರು.