ಕಾಸರಗೋಡು, ಫೆ.20 (DaijiworldNews/AK): ಎರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯೋ ರ್ವರ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ವರ್ಕಾಡಿ ಯಲ್ಲಿ ನಡೆದಿದೆ.

ವರ್ಕಾಡಿ ಸಮೀಪದ ನಾವಡ್ರಬೈಲ್ ನಕ್ಸೇವಿಯರ್ ಡಿ ಸೋಜ (65) ಮೃತಪಟ್ಟವರು. ಮನೆಯ ಯಿಂದ 200 ಮೀಟರ್ ದೂರದ ಸಂಬಂಧಿಕ ರೋ ರ್ವರ ತೋಟದ ಕೆರೆಯಲ್ಲಿ ಗುರುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ.
ಮಂಗಳವಾರ ರಾತ್ರಿ ಮನೆಯಿಂದ ಹೊರ ತೆರಳಿದವರು ನಾಪತ್ತೆಯಾಗಿದ್ದರು. ತಡರಾತ್ರಿ ತನಕ ಮನೆಗೆ ಹಿಂತಿರುಗದೆ ಹಿನ್ನಲೆಯಲ್ಲಿ ಮನೆಯವರು ಹಾಗೂ ಪರಿಸರ ವಾಸಿಗಳು ಶೋಧ ನಡೆಸಿದ್ದರು.ನಾಪತ್ತೆ ಬಗ್ಗೆ ಮನೆಯವರು ಮಂಜೇಶ್ವರ ಪೊಲೀಸ್ ಠಾಣೆ ಗೆ ದೂರು ನೀಡಿದ್ದರು. ಪೊಲೀಸರು ಮತ್ತು ನಾಗರಿಕರು ಹುಡುಕಾಟ ನಡೆಸುತ್ತಿದ್ದಂತೆ ಗುರುವಾರ ಮಧ್ಯಾಹ್ನ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿದೆ.
ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿದ್ದು, ಮರಣೋತ್ತರ ಪರೀಕ್ಷೆ ಗಾಗಿ ಮಂಗಲ್ಪಾಡಿ ಯಲ್ಲಿರುವ ಮಂಜೇಶ್ವರ ತಾಲೂ ಕು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ