ಉಡುಪಿ, ಫೆ.20(DaijiworldNews/TA): ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಕಾಂಗ್ರೆಸ್ ಪಕ್ಶದವರದ್ದು ಯಾವುದೇ ಅಡ್ಡಿಯಿಲ್ಲ ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿ ಮಾಡಲು ಹೋಗಿ ಮಾಜಿ ಸಚಿವ ಸುನೀಲ್ ಕುಮಾರ್ ಕಾರ್ಕಳ ಜನತೆಗೆ ಅವಮಾನ ಮಾಡಿದ್ದಾರೆ. ಮಾತ್ರವಲ್ಲದೆ ಅಭಿವೃದ್ಧಿಯ ನೆಪದಲ್ಲಿ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.

ಅವರು ಈ ಬಗ್ಗೆ ಉಡುಪಿ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಧಾರ್ಮಿಕ ಮುಖಂಡರ ಒಳಗೊಂಡು ಮತ್ತು ಕರ್ನಾಟಕ ಸರಕಾರದ ಮೂಲಕ ಪರಶುರಾಮ ಥೀಮ್ ಪಾರ್ಕ್ ನ್ನು ಉತ್ತಮ ರೀತಿಯಲ್ಲಿ ನಿರ್ಮಾಣವನ್ನು ಮಾಡಬೇಕು. ಈ ಹಿಂದೆ ಎಷ್ಟು ಅನ್ಯಾಯವಾಗಿದೆ ಅದನ್ನು ಬಿಟ್ಟು ಪ್ರಸ್ತುತ ಧಾರ್ಮಿಕ , ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ನಿಲುವು.
ನೈಜವಾದ ಪರಶುರಾಮ ಥೀಮ್ ಪಾರ್ಕ್ ನಮಗೆ ಬೇಕು. ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡುವಾಗ ಅವರು ದೇವರ ಕುರುಹಗಳನ್ನು ನಾಶಪಡಿಸಿದ್ದಾರೆ. ಅದನ್ನು ಸಹ ಸರಿಪಡಿಸಬೇಕು. ದೇವರ ಕುರುಹುಗಳನ್ನು ನಾಶ ಮಾಡಿದ್ದರಿಂದ ಇಂತಹ ಸಮಸ್ಯೆಗಳು ಆಗುತ್ತಿವೆ ಎಂದು ಕಾರ್ಕಳದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅಪಪ್ರಚಾರ ಮಾಡದೇ ಧಾರ್ಮಿಕ ಚಿಂತನ ಚಾವಡಿ ಎಂದು ಮಾಡಿಕೊಂಡು ಪರಶುರಾಮ ಥೀಮ್ ಪಾರ್ಕ್ ಸಂಪೂರ್ಣಗೊಳಿಸಲಿ ಎಂದು ಹೇಳಿದರು.