ಕಡಬ, ಜೂ 13(Daijiworld News/MSP): ಕೆಎಸ್ಆರ್'ಟಿಸಿ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯದಲ್ಲಿ ಜೂ . 13 ರ ಗುರುವಾರ ಸಂಭವಿಸಿದೆ.
ಮೃತ ಸವಾರನನ್ನು ಬಲ್ಯ ಮದ್ರಾಡಿ ನಿವಾಸಿ ರಾಮಚಂದ್ರ ಗೌಡ ಎಂಬವರ ಪುತ್ರ ಮೋಕ್ಷಿತ್ (21) ಎಂದು ಗುರುತಿಸಲಾಗಿದೆ. ಮೋಕ್ಷಿತ್ ಸುಬ್ರಹ್ಮಣ್ಯ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದ. ಈತ ತನ್ನ ಪಲ್ಸರ್ ಬೈಕಿನಲ್ಲಿ ಬಲ್ಯದಿಂದ ಕಡಬಕ್ಕೆ ತೆರಳುತ್ತಿದ್ದಾಗ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿಯುಂಟಾಗಿ ಈ ದುರ್ಘಟನೆ ಸಂಭವಿಸಿದೆ. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.