ಕಾಸರಗೋಡು, ಫೆ.21 (DaijiworldNews/AK):ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಮಾದಕ ವಸ್ತು ಸಹಿತ ನಾಲ್ವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಉಪ್ಪಳ ಕೋಡಿ ಬೈಲ್ ನ ಇಬ್ರಾಹಿಂ ಸಿದ್ದೀಕ್(33), ಉಪ್ಪಳ ಪ್ರತಾಪ ನಗರದ ಮೂಸಾ ಶಫೀಕ್ (30), ಆಡ್ಕ ತ್ತ ಬೈಲ್ ನ ಮುಹಮ್ಮದ್ ಸಾಲಿ (46) ಮತ್ತು ಮುಹಮ್ಮದ್ ಸವಾದ್ (20) ಬಂಧಿತ ಆರೋಪಿಗಳು.
ಇವರ ಬಳಿಯಿಂದ 21.5 ಗ್ರಾಂ ಎಂ ಡಿ ಎಂ ಎ ಮಾದಕ ವಸ್ತು ವನ್ನು ವಶಪಡಿಸಿಕೊಳ್ಳಲಾಗಿದೆ. ಕುಂಬಳೆ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಚೇವಾರ್ ಎಂಬಲ್ಲಿ ಕಾರು ತಡೆದ ಪೊಲೀಸರು ತಪಾಸಣೆ ನಡೆಸಿದಾಗ ಇವರ ಬಳಿಯಿಂದ ಮಾದಕ ವಸ್ತು ಪತ್ತೆಯಾಗಿದೆ.